ಒಂದು ವೇಳೆ ಪಾಕಿಸ್ತಾನದಲ್ಲಿ ಆಡಿದ್ದರೆ... ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ

Team India
Published on

ನವದೆಹಲಿ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡವು ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಈ ಮೂಲಕ ಮುಂಬರುವ ಸರಣಿ ಹಾಗೂ ಐಸಿಸಿ ಟೂರ್ನಿಗಳಿಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ.

ಇನ್ನೂ ಟೂರ್ನಿ ಆರಂಭಕ್ಕೂ ಮುಂಚಿನಿಂದಲೇ ಹೆಚ್ಚು ಸದ್ದು ಮಾಡಿದ್ದು, ಭಾರತ (India) ಹಾಗೂ ಪಾಕ್ (Pak) ನಡುವಿನ ಕಿತ್ತಾಟಕ್ಕೆ ಎಂದರೆ ತಪ್ಪಾಗಲಾರದು. ಭದ್ರತೆಯ ಕಾರಣ ನೀಡಿ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್​ ಮಾದರಿ) ಆಡಿತ್ತು. ಆ ನಂತರ ಪಿಚ್​ನ ಸಂಪೂರ್ಣ ಲಾಭ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಈ ಆರೋಪಗಳಿಗೆ ಪಾಕ್ನ ಮಾಜಿ ಕ್ರಿಕೆಟಿಗ ಉತ್ತರ ನೀಡಿದ್ದು, ಟೀಕಾಕಾರರ ಬಾಯನ್ನು ಮುಚ್ಚಿಸಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಪಾಕಿಸ್ತಾನ (Pak) ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಂ​​, ಭಾರತ ಪಾಕಿಸ್ತಾನದ ನೆಲದಲ್ಲಿ ಆಡಿದ್ದರೂ ಅಷ್ಟೇನು ವ್ಯತ್ಯಾಸವಾಗುತ್ತಿರಲಿಲ್ಲ. ಹೌದು, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಬೇಕೆಂದು ನಿರ್ಧರಿಸಿದ ನಂತರ ಸಾಕಷ್ಟು ಮಾತುಕತೆಗಳು ನಡೆದವು. ಆದರೆ ಅವರು ಪಾಕಿಸ್ತಾನದಲ್ಲಿ ಆಡಿದ್ದರೆ, ಅವರು ಅಲ್ಲಿಯೂ ಗೆಲ್ಲುತ್ತಿದ್ದರು. 

Wasim Akram

2024ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಕೂಡ ಅಜೇಯವಾಗಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದಾದ ಬಳಿಕ ಒಂದೇ ಒಂದು ಪಂದ್ಯವನ್ನು ಸಹ ಸೋಲದೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರು, ಇದು ಅವರ ಕ್ರಿಕೆಟ್‌ನಲ್ಲಿರುವ ಆಳವನ್ನು ತೋರಿಸುತ್ತದೆ, ಅದು ಅವರ ನಾಯಕತ್ವವನ್ನು ತೋರಿಸುತ್ತದೆ. 

ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತ ನಂತರ ಕೋಚ್​ ಹಾಗೂ ನಾಯಕನನ್ನು ತೆಗೆದುಹಾಕುವ ಬಗ್ಗೆ ಮಾತುಕತೆಗಳು ವ್ಯಾಪಕವಾಗಿ ಹರಿದಾಡಿದ್ದವು. ಆದರೆ, ಅಲ್ಲಿನ ಕ್ರಿಕೆಟ್ ಮಂಡಳಿ ಅವರ ವಿರುದ್ಧ ಕ್ರಮ ಜರುಗಿಸದೆ ಬೆಂಬಲಿಸಿದ ಪರಿಣಾಮ ಇಂದು ತಂಡ ಚಾಂಪಿಯನ್​ಗಳ ಚಾಂಪಿಯನ್ ಆಗಿ ಹೊರೊಮ್ಮಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ (Pak) ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net