ನ್ಯೂಸ್

ಬಾಕ್ಸ್​ ಆಫೀಸ್​ನಲ್ಲಿ ಮುಗ್ಗರಿಸಿದ 'ಚಂದ್ರಮುಖಿ 2' ಈಗ ಒಟಿಟಿಗೆ

ತಮಿಳುನಾಡು: ಕಾಲಿವುಡ್​ ಸ್ಟಾರ್, ನೃತ್ಯ ಸಂಯೋಜಕ ನಟ ರಾಘವ್​ ಲಾರೆನ್ಸ್ ಮತ್ತು ಬಾಲಿವುಡ್​ ಬೆಡಗಿ ನಟಿ ಕಂಗನಾ ರಣಾವತ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಚಂದ್ರಮುಖಿ 2' ಇದೀಗ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದ್ದು, ದಿನಾಂಕ ಕೂಡ ನಿಗದಿಯಾಗಿದೆ.

ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದ ಹೈ ಬಜೆಟ್​ನ ಹಾರರ್-ಥ್ರಿಲ್ಲರ್ 'ಚಂದ್ರಮುಖಿ 2' ಸೆಪ್ಟೆಂಬರ್ 28 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ನಿರೀಕ್ಷಿಸಿದಂತೆ ಕಮಾಲ್ ಮಾಡದ ಚಿತ್ರವು ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಮುಗ್ಗರಿಸಿತು.

ಇತ್ತೀಚಿನ ವರದಿಗಳ ಪ್ರಕಾರ, 'ಚಂದ್ರಮುಖಿ 2' ಚಿತ್ರದ ಡಿಜಿಟಲ್ ಪ್ರೀಮಿಯರ್ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ಆದ ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್ 26 ರಂದು ಬಿಡುಗಡೆಯಾಗಲಿದೆ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸದ ಪ್ರೇಕ್ಷಕರು ಇದೀಗ 28 ರಂದು ಒಟಿಟಿಯಲ್ಲಿ ನೋಡಬಹುದಾಗಿದೆ.

'ಚಂದ್ರಮುಖಿ 2' ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಜೋತಿಕಾ ಅಭಿನಯದ 'ಚಂದ್ರಮುಖಿ 1'ರ ಮುಂದುವರಿದ ಭಾಗವಾಗಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರದಲ್ಲಿ ರಾಘವ್​ ಲಾರೆನ್ಸ್​, ಕಂಗನಾ ರಣಾವತ್​, ಮಹಿಮ ನಂಬಿಯಾರ್​, ಸುಭಿಕ್ಷಾ, ಲಕ್ಷ್ಮಿ ಮೆನನ್​, ಸೃಷ್ಟಿ ದಂಗೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).