ನ್ಯೂಸ್

ದಲಿತರಿಗೆ ಮೋಸ ಮಾಡಿದ್ದಕ್ಕೆ ವ್ಹೀಲ್​ ಚೇರ್ ಬದಲು ಬೇರೆ ಚೇರ್​ ಬರುತ್ತದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು: ಬಡವರಿಗೆ ಅನ್ಯಾಯ ಮಾಡಿದ್ದ್ಕಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ವ್ಹೀಲ್​ಚೇರ್​ನಲ್ಲಿ ಓಡಾಡುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಮೋಸ ಮಾಡಿದ್ದಕ್ಕೆ ಮುಂದೊಂದು ದಿನ ವ್ಹೀಲ್​ಚೇರ್​ ಬದಲು ಬೇರೆ ಚೇರ್ ಬರಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

ಎಸ್​ಸಿ-ಎಸ್​ಟಿ ಸಮುದಾಯದ ಹಣ ದುರ್ಬಳಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ರೂಪಾಯಿ ಹಣವನ್ನ ಲೂಟಿ ಮಾಡಿ ಬಡವರಿಗೆ ಅನ್ಯಾಯ ಮಾಡಲಾಗಿದೆ. ಬಡವರಿಗೆ ಮೋಸ ಮಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಹೀಲ್​ ಚೇರ್​ನಲ್ಲಿ ಓಡಾಡುವಂತಾಗಿದೆ.

ದಲಿತರ ಹಣವನ್ನು ನುಂಗಲು ಹೋಗಿ ಅದು ನಿಮ್ಮ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ನಮ್ಮ ಸಮುದಾಯಕ್ಕೆ ಮೋಸ ಮಾಡಿದರೆ ವ್ಹೀಲ್​ ಚೇರ್ ಬದಲು ಬೇರೆ ಚೇರ್​ನಲ್ಲಿ ಓಡಾಡಬೇಕಾಗುತ್ತದೆ. ಪರಿಶಿಷ್ಟರು ಮೋಜು, ಮಸ್ತಿ ಮಾಡುವುದಿಲ್ಲ. ಆದರೆ, ಅವರಿಗೆ ಮೀಸಲಿಟ್ಟಿದ್ದ ಹಣವನ್ನು ಮುಖ್ಯಮಂತ್ರಿಗಳ ಖಾತೆಗೆ ವರ್ಗಾಯಿಸಲಾಗಿದೆ. ಇದು ದಲಿತ ಸಮುದಾಯಕ್ಕೆ ಮಾಡಿದ ಮೋಸ ಎಂದು ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.