ನ್ಯೂಸ್

ಹೈಡ್ರೋಜನ್ ರೈಲಿಗೆ ಚೀನಾ ಚಾಲನೆ; ಚಾರ್ಜ್ ಮಾಡಿದರೆ 600 ಕಿ.ಮೀ. ದೂರ ಸಂಚಾರ

ಚೆಂಗ್ಡು: ಚೀನಾದಲ್ಲಿ ಇದೇ ಮೊದಲ ಬಾರಿಗೆ ಜಲಜನಕ (ಹೈಡ್ರೋಜನ್) ಆಧಾರಿತ ಸೆಮಿ ಹೈಸ್ಪೀಡ್ ಸ್ಪೀಡ್ ಪ್ಯಾಸೆಂಜರ್ ರೈಲು ಚಾಲನೆಗೊಂಡಿದೆ. ಇದು ಏಷ್ಯಾದಲ್ಲಿ ಮೊದಲ ಮತ್ತು ವಿಶ್ವದಲ್ಲಿ ಎರಡನೇ ಹೈಡ್ರೋಜನ್ ರೈಲು ಕೂಡ ಆಗಿದೆ. 2022ರ ಆಗಸ್ಟ್ ನಲ್ಲಿ ಜರ್ಮನಿಯಲ್ಲಿ ವಿಶ್ವದ ಮೊದಲ ಹೈಡ್ರೋಜನ್ ರೈಲು ಕಾರ್ಯಾರಂಭ ಮಾಡಿತ್ತು.

ಚೆಂಗ್ಡು ರೈಲ್ವೆ ಗ್ರೂಪ್ ಮತ್ತು ಚಾಂಗ್ಚುನ್ ಸಿಆರ್​ಆರ್​ಸಿ ಜಂಟಿಯಾಗಿ ಹೈಡ್ರೋಜನ್ ಚಾಲಿತ ನಾಲ್ಕು ರೈಲುಗಳನ್ನು ಅಭಿವೃದ್ಧಿಪಡಿಸಿವೆ. ಒಮ್ಮೆ ಹೈಡ್ರೋಜನ್ ಇಂಧನ ಕೋಶವನ್ನು ಚಾರ್ಜ್ ಮಾಡಿದರೆ 600 ಕಿ.ಮೀ. ದೂರದವರೆಗೂ ತಾಸಿಗೆ 160 ಕಿ,ಮೀ. ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಇವು ಹೊಂದಿವೆ.

ಈ ರೈಲು 1,502 ಪ್ರಯಾಣಿಕರ ಸಾಮರ್ಥ್ಯದ್ದಾಗಿದ್ದು, ಚಾಲಕ ರಹಿತವಾಗಿಯೂ ಚಾಲನೆಯಾಗುವ ಸ್ವಯಂ ಚಾಲಿತ ವ್ಯವಸ್ಥೆ ಹೊಂದಿದೆ. ಅತ್ಯಾಧುನಿಕ ಮತ್ತು ಸೂಕ್ಷ್ಮ ಸಂವೇದಿಕ, ನಿಗಾ ವ್ಯವಸ್ಥೆ, ಗರಿಷ್ಠ ಸುರಕ್ಷತಾ ವಿಧಾನಗಳು 5ಜಿ ಮೊಬೈಲ್ ನೆಟ್​ವರ್ಕ್ ಈ ರೈಲಿನಲ್ಲಿರುವ ಇನ್ನಿತರ ವಿಶೇಷಗಳು. ಹೈಡ್ರೋಜನ್ ಚಾಲಿತ ರೈಲನ್ನು ವಿದ್ಯುದೀಕರಣ ಆಗಿಲ್ಲ ಮಾರ್ಗದಲ್ಲೂ ಬಳಬಹುದಾಗಿದೆ.

ಹೈಡ್ರೋಜನ್ ಇಂಧನ ಹೇಗೆ?

ಹೈಡ್ರೋಜನ್ ಆಧಾರಿತ ಇಂಧನದಲ್ಲಿ ನೀರಿನಿಂದ ಜಲಜನಕ ಮತ್ತು ಆಮ್ಲಜನಕಗಳ ವಿಘಟನೆ ವೇಳೆ ಉಂಟಾಗುವ ಎಲೆಕ್ಟೋ›ಕೆಮಿಕಲ್ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿ ಇಂಧನವಾಗಿ ಪರಿವರ್ತನೆ ಆಗುತ್ತದೆ. ಇದು ಗರಿಷ್ಠ ಮಟ್ಟದಲ್ಲಿ ಪರಿಸರಸ್ನೇಹಿ ಆಗಿದೆ.