ನ್ಯೂಸ್

ಸಿಡಿ ಕೇಸ್​: ಪೊಲೀಸರ ಮುಂದೆ ಬಿಕ್ಕಿಬಿಕ್ಕಿ ಅಳುತ್ತಲೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುವತಿಯ ಪ್ರಿಯಕರ!

arunakunigal

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಎಸ್​ಐಟಿ ತನಿಖೆ ಬೇಳೆ ಸಿಡಿ ಲೇಡಿಯ ಪ್ರಿಯತಮ ಬಿಕ್ಕಿ ಬಿಕ್ಕಿ ಅಳುತ್ತಲೇ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ.

ಸಿಡಿ ರಿಲೀಸ್​ಗೂ ಮುನ್ನ ಮಾಸ್ಟರ್ ಪ್ಲಾನ್ ನಡೆದಿತ್ತಂತೆ. ಸಿಡಿ ರಿಲೀಸ್ ಆಗುತ್ತಿದ್ದಂತೆ ಎಲ್ಲಿಗೆ ಹೋಗ್ಬೇಕು? ಏನ್ ಮಾಡ್ಬೇಕು? ಅನ್ನೋದರ ಕಂಪ್ಲೀಟ್ ಪ್ಲಾನಿಂಗ್ ಮಾಡಿಕೊಂಡಿದ್ದಂತೆ ಕಿಂಗ್​ಪಿನ್​ಗಳು. ಸಿಡಿ ರಿಲೀಸ್ ಅಗಿದ್ದ ದಿನವೇ ಆ ಫೂಟೇಜ್ ಅನ್ನು ಯುವತಿಯ ಬಾಯ್​ಫ್ರೆಂಡ್​​ಗೆ ಮೂವರು ಗೆಳೆಯರು ಕಳುಹಿಸಿದ್ದರು. ಇದನ್ನ ಕಂಡು ಅದು ತನ್ನ ಹುಡುಗಿಯೇ? ಅಂತ ಪ್ರಿಯಕರ ಪ್ರಶ್ನಿಸಿದ್ದನಂತೆ. ಆದರೆ, ಈ ವೇಳೆ "ಇದೆಲ್ಲಾ ಸುಳ್ಳು.. ಬೇರೆ ಯಾರೊ ಮಾರ್ಫ್ ಮಾಡಿದ್ದಾರೆ" ಎಂದಿದ್ದನಂತೆ ಸಿಡಿ ಕಿಂಗ್​ಪಿನ್​. ಈ ಮಾತನ್ನು ಯುವತಿಯ ಪ್ರಿಯಕರ ಒಪ್ಪದಿದ್ದಾಗ ಆತನಿಗೆ ಬೇರೆ ಬೇರೆ ವಿಡಿಯೋ ತೋರಿಸಿ ಕನ್ವೆನ್ಸ್ ಮಾಡಲಾಗಿತ್ತಂತೆ. "ಯುವತಿಯ ಜೀವಕ್ಕೆ ತೊಂದರೆ ಇದೆ. ಗೋವಾಕ್ಕೆ ಹೋಗಿ ಅಲ್ಲೇ ಕೆಲ ದಿನ ಇರಿ" ಯುವತಿ ಮತ್ತು ಆಕೆಯ ಬಾಯ್​ಫ್ರೆಂಡ್ ಅನ್ನು ಸಿಡಿ ಗ್ಯಾಂಗ್​ ಕಳಿಸಿತ್ತಂತೆ. ಗೋವಾದಲ್ಲಿ ಸತ್ಯ ಅರಿತ ಪ್ರಿಯಕರ ವಾಪಸ್​ ಬಂದಿದ್ದಾನೆ. ಇದನ್ನೂ ಓದಿರಿ ಚಲಿಸುತ್ತಿದ್ದ ಕಾರಿನ ಮೇಲೆ ಜಲ್ಲಿ ತುಂಬಿದ್ದ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು

ಪ್ರೇಯಸಿಯನ್ನ ತನ್ನ ಜೀವನದಲ್ಲಿ ಎಂದಿಗೂ ಮಾತನಾಡಿಸಬಾರದು ಎಂದು ತೀರ್ಮಾನ ಮಾಡಿದ್ದ ವೇಳೆಯೇ ಎಸ್​ಐಟಿ ತಂಡ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದೆ. ಪೊಲೀಸರ ಬಳಿ ಯುವತಿಯ ಸಂಪೂರ್ಣ ಚಿತ್ರಣ ತೆರೆದಿಟ್ಟಿರುವ ಪ್ರಿಯತಮ, ಆಕೆಯ ಲೀವಿಂಗ್ ಸ್ಟೈಲ್ ಹಿನ್ನೆಲೆ, ಖರ್ಚು ಮಾಡುತ್ತಿದ್ದ ಹಣ, ಪಾರ್ಟಿ ಮಾಡುತ್ತಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಿಯತಮ ಕೊಟ್ಟ ಮಾಹಿತಿ ಮೇರೆಗೆ ಪ್ರತಿಯೊಂದು ಸ್ಥಳಕ್ಕೂ ಭೇಟಿ ನೀಡಿ ಎಸ್​ಐಟಿ ಮಾಹಿತಿ ಕಲೆ ಹಾಕಿದೆಯಂತೆ.