ನವದೆಹಲಿ: ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ 18.34 ಕೋಟಿ ರೂ. ನಷ್ಟ ಮಾಡಿದ್ದ ನಾಲ್ವರು ಆರೋಪಿಗಳಿಗೆ ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಜೈಲುಶಿಕ್ಷೆ ವಿಧಿಸಿದ್ದಲ್ಲದೆ, ಒಟ್ಟು 23.02 ಕೋಟಿ ದಂಡವನ್ನೂ ವಿಧಿಸಿದ್ದಾರೆ.
ಖಾಸಗಿ ಕಂಪನಿಯ ನಿರ್ದೇಶಕ ಜಿ. ಧನಂಜಯರೆಡ್ಡಿಗೆ 4 ವರ್ಷಗಳ ಸರಳ ಶಿಕ್ಷೆ, 10 ಕೋಟಿ ರೂ. ದಂಡ, ಕೆ.ಸತ್ಯನಾರಾಯಣ ಎಂಬಾತನಿಗೆ 4 ವರ್ಷಗಳ ಸರಳ ಶಿಕ್ಷೆ 12 ಕೋಟಿ ರೂ. ದಂಡ, ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜಿ. ನಿರ್ಮಲಾಗೆ 1 ವರ್ಷದ ಸರಳ ಶಿಕ್ಷೆ, 1 ಲಕ್ಷ ರೂ. ದಂಡ, ಖಾಸಗಿ ಕಂಪನಿ ನಿರ್ದೇಶಕ ದಿನೇಶ್ ಕಾವೂರು ಎಂಬಾತನಿಗೆ 1 ವರ್ಷ ಸರಳ ಶಿಕ್ಷೆ, 1 ಲಕ್ಷ ರೂ. ದಂಡ, ಯುನೈಟೆಡ್ ಬ್ಯಾಂಕ್ ಇಂಡಿಯಾದ ಕಂಟೋನ್ಮೆಂಟ್ ಶಾಖೆಯ ಎಜಿಎಂ ಆಗಿದದ್ ರಾಜೇಶ್ಕುಮಾರ್ ಮಾಧವ್ಗೆ 1 ವರ್ಷದ ಸರಳ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ನೆಕ್ಸಾಫ್ಟ್ ಇನ್ಫೊಟೆಲ್ ಲಿಮಿಟೆಡ್ (M/s NexxoftInfotel Ltd) ಕಂಪನಿಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಕಾರ್ಪೋರೇಟ್ ಉದ್ಯೋಗ ಬಿಟ್ಟು ಕ್ಯಾಬ್ ಓಡಿಸುತ್ತಿರುವ ಈ ಇಂಜಿನಿಯರ್ಗೆ ಅಲ್ಲಿಗಿಂತ ಇಲ್ಲೇ ಜಾಸ್ತಿ ಸಂಪಾದನೆ!
ಆರೋಪಿಗಳು ಕಂಟೋನ್ಮೆಂಟ್ ಬ್ರ್ಯಾಂಚ್ನ ಯುನೈಟೆಡ್ ಬ್ಯಾಂಕ್ನಿಂದ 16 ಕೋಟಿ ರೂ. ಸಾಲ ಪಡೆದಿದ್ದರು. ದುಬೈ ಮೂಲದ ಕಂಪನಿಯಿಂದ ಸಾಫ್ಟ್ವೇರ್ ಆಮದು ಕೊಂಡುಕೊಳ್ಳಲು ಎಂಬುದಾಗಿ ಅವರು ಈ ಸಾಲ ಪಡೆದಿದ್ದರು. 21.5 ಕೋಟಿ ರೂ. ಸಾಫ್ಟ್ವೇರ್ ಪ್ಯಾಕೇಜ್ ಮೇಲೆ ವಿಶೇಷ ಶುಲ್ಕ ಮತ್ತು ಬೆಂಗಳೂರಿನ ಸಾದರಮಂಗಲ ಗ್ರಾಮದಲ್ಲಿರುವ 1 ಎಕರೆ 30 ಗುಂಟೆ ಜಮೀನು ಮೇಲಾಧಾರ ಭದ್ರತೆ ಒದಗಿಸಲಾಗಿತ್ತು. ಆದರೆ ಬಳಿಕ ಅವರು ಆ ನಿಧಿಯನ್ನು ಡೈವರ್ಟ್ ಮಾಡಿದ್ದು, ಪ್ರಾಥಮಿಕ ಭದ್ರತೆ ಖಾತೆಯಲ್ಲಿ ಇರಲಿಲ್ಲ. ಹೀಗಾಗಿ 2011ರ ಜೂ. 30ರಿಂದ ಈ ಸಾಲ ಎನ್ಪಿಎ ಆಗಿತ್ತು. 13.44 ರೂ. ಸಾಲದ ಮೊತ್ತ ಬಳಿಕ 18.34 ಕೋಟಿ ರೂ.ಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ 2013ರ ಮೇ 4ರಂದು ಸಿಬಿಐನಲ್ಲಿ ಕೇಸು ದಾಖಲಾಗಿತ್ತು.