ನ್ಯೂಸ್

ವಿವಾಹಿತ ಮಹಿಳೆಯ ಮತಾಂತರಕ್ಕೆ ಯತ್ನಿಸಿದ ಯುವಕ, ಚಾಟಿಂಗ್​​ನಲ್ಲಿ ಬಯಲಾಯ್ತು ಕೃತ್ಯ

ಸಿಕರ್: ಯುವಕನೊಬ್ಬ ಆನ್‌ಲೈನ್ ಗೇಮಿಂಗ್ ಮೂಲಕ ವಿವಾಹಿತ ಮಹಿಳೆಯನ್ನು ಮತಾಂತರ ಮಾಡಲು ಯತ್ನಸಿದ ಪ್ರಕರಣವೊಂದು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೋತಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕರಡಿ ವೇಷದ ಮೊರೆ ಹೋದ ರೈತರು!

ಆರೋಪಿಯನ್ನು ತಯ್ಯಬ್​ ಎಂದು ಗುರುತಿಸಲಾಗಿದ್ದು ಉತ್ತರ ಪ್ರದೇಶದ ಅಲಿಘರ್ ನಿವಾಸಿಯಾಗಿದ್ದಾನೆ. ಇನ್ನು, ವಿವಾಹಿತ ಮಹಿಳೆಯ ಪತಿಗೆ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು ಆಕೆ ಸಮಯ ಕಳೆಯುವ ಸಲುವಾಗಿ ಆನ್​ಲೈನ್​ ಗೇಮಿಂಗ್​ ಮೊರೆ ಹೋಗಿದ್ದಾಳೆ.

ಈ ವೇಳೆ ಮಹಿಳೆಗೆ ತಯ್ಯಬ್​ನ ಪರಿಚಯವಾಗಿದ್ದು, ಆತ ನಯವಾಗಿ ಮಾತನಾಡುತ್ತ ಆಕೆಯ ಸ್ನೇಹವನ್ನು ಗಳಿಸಿ ಕೊನೆಗೆ ಆಕೆಯ ಮೊಬೈಲ್​ ನಂಬರ್​​ನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು.

ಇದನ್ನೂ ಓದಿ: ಪಾರ್ವತಮ್ಮ ರಾಜ್​ಕುಮಾರ್​ ತಮ್ಮನ ಮಗನಿಗೆ ಅಪಘಾತ; ಬಲಗಾಲು ಕಳೆದುಕೊಂಡ ಯುವ ನಟ ಸೂರಜ್​

ಆಕೆಯ ಜತೆಗೆ ಪ್ರೀತಿಯ ನಾಟಕವಾಡಿದ ತಯ್ಯಬ್​, ನಿಧಾನವಾಗಿ ಇಸ್ಲಾಂ ಧರ್ಮದ ಆಚರಣೆಗಳ ಬಗ್ಗೆ ತಿಳಿಸಿದ್ದಾನೆ. ಆಕೆ ನಿಧಾನವಾಗಿ ಮಹಿಳೆಯು ಹಣೆಯಲ್ಲಿ ಕುಂಕುಮವಿಡುವುದನ್ನು ತ್ಯಜಿಸಿ, ದೇವಸ್ಥಾನಕ್ಕೆ ಹೋಗುವುದನ್ನು ತಪ್ಪಿಸಿದ್ದಾಳೆ. ಮಹಿಳೆಯ ವರ್ತನೆ ನೋಡಿ ಮನೆಯವರಿಗೆ ಅನುಮಾನ ಬಂದಿದೆ.

ಕೂಡಲೇ ಮಹಿಳೆಯ ಸಹೋದರ ಆಕೆಗೆ ತಿಳಿಯದಂತೆ ವಾಟ್ಸ್​​ಆ್ಯಪ್​ ಚಾಟ್​​ ನೋಡಿದಾದ ಘಟನೆ ಬೆಳಕಿಗೆ ಬಂದಿದೆ. ಅದರಲ್ಲಿ ತಯ್ಯಬ್ ನಮಾಜ್ ಮಾಡುವುದು ಹೇಗೆ ಎಂದು ಯೂಟ್ಯೂಬ್ ಲಿಂಕ್‌ಗಳನ್ನು ಕಳುಹಿಸಿದ್ದಾನೆ. ವಾಟ್ಸ್‌ಆ್ಯಪ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಯುವಕ ವಿವಾಹಿತ ಮಹಿಳೆಯನ್ನು ಮುಸ್ಲಿಂ ಹೆಸರಿನಿಂದ ಕರೆಯುತ್ತಿದ್ದದ್ದು ಬೆಳಕಿಗೆ ಬಂದಿದೆ. ನಂತರ ಆಕೆಯ ಮನೆಯವರು ಧಾರ್ಮಿಕ ಮತಾಂತರ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)