ನ್ಯೂಸ್

ಮದುವೆಯಾಗದ ಜೋಡಿ ಹೋಟೆಲ್​ ರೂಮ್​ ಬುಕ್​ ಮಾಡಬಹುದೇ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಉತ್ತರ... Unmarried

Unmarried : ಇಬ್ಬರು ಅವಿವಾಹಿತರು (ಒಬ್ಬ ಪುರುಷ ಮತ್ತು ಮಹಿಳೆ) ಹೋಟೆಲ್ ರೂಮ್​ ಬುಕ್​ ಮಾಡಲು ಏನಾದರೂ ಅಡಚಣೆ ಇದೆಯೇ? ರೂಮ್​ ಬುಕ್​ ಮಾಡಿದರೆ ಕಾನೂನು ಸಮಸ್ಯೆ ಎದುರಾಗುತ್ತಾ? ಇದು ಅನೇಕ ಜನರಿಗೆ ಇರುವ ಸಾಮಾನ್ಯ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.

ಭಾರತದ ಕಾನೂನು ವ್ಯವಸ್ಥೆಯ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ, ಅಂದರೆ ವಯಸ್ಕರು ಹೋಟೆಲ್ ರೂಮ್​ ಅನ್ನು ಬುಕ್​ ಮಾಡಲು ಯಾವುದೇ ಅಡಚಣೆಯಿಲ್ಲ. ಆದರೆ, ಬುಕ್ ಮಾಡುವಾಗ ಮಾನ್ಯವಾದ ಗುರುತಿನ ಚೀಟಿ ನೀಡುವುದು ಕಡ್ಡಾಯವಾಗಿದೆ.

ಗುರುತಿನ ಚೀಟಿ ತೋರಿಸಿದ ನಂತರ ಯಾರಾದರೂ ಹೋಟೆಲ್‌ನಲ್ಲಿ ರೂಮ್​ ಬುಕ್​ ಮಾಡಬಹುದು. ಆದರೆ, ನೀವು ಉಳಿಯಲು ಬಯಸುವ ಹೋಟೆಲ್​ನಲ್ಲಿ ಇದಕ್ಕೆ ಅನುಮತಿ ನೀಡ್ತಾರಾ ಅನ್ನೋದನ್ನು ರೂಮ್​ ಬುಕ್​ ಮಾಡುವ ಮುನ್ನ ನೀವು ಖಚಿತಪಡಿಸಿಕೊಳ್ಳಬೇಕು.

ಕೆಲ ಹೋಟೆಲ್‌ಗಳಲ್ಲಿ ಅವಿವಾಹಿತ ಪುರುಷರು ಮತ್ತು ಮಹಿಳೆಯರಿಗೆ ಕೊಠಡಿ ನೀಡಬಾರದು ಎಂಬ ನಿಯಮವಿದೆ. ಅಂತಹ ಹೋಟೆಲ್​ಗಳಲ್ಲಿ ರೂಮ್​ ಬುಕ್​ ಮಾಡಲು ಆಗುವುದಿಲ್ಲ. ಅವಿವಾಹಿತ ಪುರುಷರು ಮತ್ತು ಮಹಿಳೆಯರಿಗೆ ತಮ್ಮ ಹೋಟೆಲ್‌ನಲ್ಲಿ ವಸತಿ ಒದಗಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಹೋಟೆಲ್ ಆಡಳಿತ ಮಂಡಳಿಗೆ ಬಿಟ್ಟದ್ದು.

ನೀವು ಆನ್‌ಲೈನ್‌ನಲ್ಲಿ ಹೋಟೆಲ್ ರೂಮ್​ ಬುಕ್ ಮಾಡುತ್ತಿದ್ದರೆ, ಆ ಸಮಯದಲ್ಲಿ ಅವಿವಾಹಿತ ಜೋಡಿಗೆ ವಸತಿ ಲಭ್ಯವಿದೆಯೇ ಎಂದು ಕೇಳುವುದು ತುಂಬಾ ಮುಖ್ಯ. ಕಾನೂನಿನ ಪ್ರಕಾರ, ಅವಿವಾಹಿತ ಪುರುಷರು ಮತ್ತು ಮಹಿಳೆಯರು ದೇಶದ ಯಾವುದೇ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಲು ಯಾವುದೇ ಅಡೆತಡೆಗಳಿಲ್ಲ. ಆದಾಗ್ಯೂ, ಹೋಟೆಲ್‌ನ ನೀತಿಯನ್ನು ಅವಲಂಬಿಸಿ, ಕೊಠಡಿ ಲಭ್ಯವಿಲ್ಲದಿರಬಹುದು. (ಏಜೆನ್ಸೀಸ್​)