ನ್ಯೂಸ್

ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

ಜೈಪುರ: ಒಂಬತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಈಗ ತಾನೆ ಜನ್ಮ ನೀಡಿರುವ ಅಕ್ಕನಿಗೆ ಸಹಾಯವಾಗಿರಲೆಂದು ಅಕ್ಕನ ಮನೆಗೆ ಬಂದ ತಂಗಿಯ ಮೇಲೆ ಭಾವನೇ ರೇಪ್ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಭಾರತ್​ಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 21 ವರ್ಷದ ಯುವತಿಯ ಅಕ್ಕನಿಗೆ ಇತ್ತೀಚೆಗೆ ಹೆರಿಗೆಯಾಗಿತ್ತು. ಆಕೆಗೆ ಸಹಾಯವಾಗಲಿ ಎಂದು ಆಕೆಯ ಅಪ್ಪ ಅಮ್ಮ ತಂಗಿಯನ್ನು ಅವರ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಅಲ್ಲಿ ಆಕೆಯ ಭಾವನೇ ನಾದಿನಿಯ ಮೇಲೆ ಕಣ್ಣು ಹಾಕಿದ್ದಾನೆ.

ನಾದಿನಿಗೆ ಟೀ ಮಾಡಿ ಕೊಡುವ ನೆಪದಲ್ಲಿ ಚಹಾಕ್ಕೆ ಮತ್ತು ತರಿಸುವ ಔಷಧ ಹಾಕಿ ಕುಡಿಸಿದ್ದಾನೆ. ನಂತರ ಆಕೆಯನ್ನು ರೇಪ್ ಮಾಡಿದ್ದಾನೆ. ಎಚ್ಚರವಿಲ್ಲದಂತೆ ಬಿದ್ದಿದ್ದ ಯುವತಿ ಎಚ್ಚರಗೊಂಡಾಗ ತನಗೇನಾಗಿದೆ ಎನ್ನುವ ವಿಚಾರ ಗೊತ್ತಾಗಿದೆ. ಆಕೆ ತಕ್ಷಣ ಈ ವಿಚಾರವನ್ನು ಕುಟುಂಬಸ್ಥರಲ್ಲಿ ಹೇಳಿದ್ದಾಳೆ. ಮನೆಯವರ ಸಹಾಯದಿಂದ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಅಲ್ಲಿ ತನ್ನ ಭಾವನ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)