ನ್ಯೂಸ್

ಅಂಬಾನಿ ಮಗನ ಮದುವೆಯಲ್ಲಿ ಹಾಡಲು ಎಂಟ್ರಿ ಕೊಟ್ಟ ಮತ್ತೊಬ್ಬ ಗಾಯಕ; ಒಂದು ಹಾಡಿನ ಸಂಭಾವನೆ ಕೇಳಿ ಶಾಕ್​ ಆದ ಜನ

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದೀಗ ಮದುವೆ ಕಾರ್ಯಕ್ರಮವು ಮತ್ತೊಂದು ವಿಚಾರಕ್ಕೆ ಜನರ ಗಮನ ಸೆಳೆದಿದ್ದು, ಈ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ.

ಗುಜರಾತ್​ನ ಜಾಮ್​ನಗರದಲ್ಲಿ ಆರಂಭವಾದ ಮೊಲದ ಪ್ರೀ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಬಾಲಿವುಡ್​ ಹಾಗೂ ಕ್ರೀಡಾ ಲೋಕದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಕೆಲವು ವಾರಗಳ ಹಿಂದೆ ಇಟಲಿಯಲ್ಲಿ ಅದ್ದೂರಿಯಾಗಿ ಪ್ರೀ-ವೆಡ್ಡಿಂಗ್​ ಸಮಾರಂಭ ಮಾಡಲಾಯಿತು. ಆ ವೇಳೆ ಕರೆಸಲಾಗಿದ್ದ ಗಾಯಕರಿಗೆ ನೀಡಲಾಗಿದ್ದ ಸಂಭಾವನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಅನಂತ್​-ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಹಾಡಲು ನೈಜೀರಿಯಾದಿಂದ ಗಾಯಕನನ್ನು ಕರೆಸಲಾಗಿದ್ದು, ಈತನಿಗೆ ದುಬಾರಿ ಮೊತ್ತದ ಸಂಭಾವನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಾಮ್ ಡೌನ್ ಹಾಡಿನ ಗಾಯಕ ರೆಮಾ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಬಹು ನಿರೀಕ್ಷಿತ ವಿವಾಹದಲ್ಲಿ ಹಾಡಲಿದ್ದು, ಈ ಗಾಯಕ ಒಂದೇ ಒಂದು ಹಾಡು ಹಾಡಲಿದ್ದು, ಇದಕ್ಕಾಗಿ ಬರೋಬ್ಬರಿ 25 ಕೋಟಿ ರೂ. ಸಂಭಾವಣೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.  ಗಾಯಕ ರೆಮಾ ತನ್ನ ಫೇಮಸ್​​ ಹಾಡು ಕಾಮ್ ಡೌನ್ ಸಾಂಗ್​​ ಹಾಡಲಿದ್ದಾರೆ. ಗಾಯಕ ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಬಗ್ಗೆ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಪೋಸ್ಟ್​ ಎಲ್ಲೆಡೆ ವೈರಲ್​​ ಆಗಿದೆ.

ಇದಕ್ಕೂ ಮುನ್ನ ಪಾಪ್ ಗಾಯಕ ಜಸ್ಟಿನ್ ಬೈಬರ್ ಮತ್ತು ಪಂಜಾಬಿ ಗಾಯಕರಾದ ಬಾದ್‌ಶಾ ಮತ್ತು ಕರಣ್ ಔಜ್ಲಾ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ರಾತ್ರಿಯಲ್ಲಿ ಕಾರ್ಯಕ್ರಮ ನೀಡಿದರು. ವರದಿಯ ಪ್ರಕಾರ, ಜಸ್ಟಿನ್ ಅವರ ಅಭಿನಯಕ್ಕಾಗಿ 87 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.