ಸಿ.ವಿ.ಶಿವಶಂಕರ್ ತಮ್ಮ ಪುತ್ರ ಲಕ್ಷ್ಮಣ್ ಜತೆ ರೀಲ್ಸ್​ನಲ್ಲಿ... 
ನ್ಯೂಸ್

ಹತ್ತು ದಿನಗಳ ಹಿಂದೆ ಪುತ್ರನೊಂದಿಗೆ ರೀಲ್ಸ್​ನಲ್ಲಿ ರಂಜಿಸಿದ್ದ ಸಿ.ವಿ. ಶಿವಶಂಕರ್; ವಿಡಿಯೋ ವೈರಲ್, ಆ ಖುಷಿ ಇನ್ನು ಬರೀ ನೆನಪು!

ಬೆಂಗಳೂರು: ಯಾರು ಯಾವಾಗ ಹೇಗೆ ಅಗಲುತ್ತಾರೋ ಎಂದು ಹೇಳುವುದು ಕಷ್ಟ. ಆದರೆ ಇದ್ದಷ್ಟೂ ಕಾಲ ನಗಿಸಿ, ಖುಷಿ ಕೊಟ್ಟು ಹೋಗಬೇಕು ಎಂಬ ಮಾತಿದೆ. ಅದರಲ್ಲೂ ದೇಶಾದ್ಯಂತ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗುತ್ತಿರುವುದು ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುತ್ತದೆ.

ಇಂದು ಹೃದಯಾಘಾತದಿಂದ ನಿಧನರಾದ ಚಿತ್ರಸಾಹಿತಿ-ನಿರ್ದೇಶಕ ಸಿ.ವಿ.ಶಿವಶಂಕರ್ ಅವರು ಹತ್ತು ದಿನಗಳ ಹಿಂದೆ ರೀಲ್ಸ್​ವೊಂದರ ಮೂಲಕ ಬಹಳಷ್ಟು ಮಂದಿಯನ್ನು ರಂಜಿಸಿದ್ದರು. ಅವರು ತಮ್ಮ ಪುತ್ರ, ಸಾಫ್ಟ್​ವೇರ್ ಉದ್ಯೋಗಿ ಲಕ್ಷ್ಮಣ್ ಅವರೊಂದಿಗೆ ಮಾಡಿದ್ದ ಒಂದು ವಿಡಿಯೋ ತುಣುಕು ವೈರಲ್ ಆಗಿತ್ತು. ನಟ, ಚಿತ್ರಸಾಹಿತಿಯೂ ಆಗಿರುವ ಪುತ್ರ ಲಕ್ಷ್ಮಣ್ ತಮ್ಮ ತಂದೆಯ ಜತೆಗಿನ ಆ ರೀಲ್ಸ್​ ಜೂ. 17ರಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ಸಿ.ವಿ. ಶಿವಶಂಕರ್ ತಮ್ಮ ಪುತ್ರನೊಂದಿಗೆ ಮಾಡಿದ್ದ ರೀಲ್ಸ್ ಇಲ್ಲಿದೆ..