ನ್ಯೂಸ್

VIDEO| ಒಡತಿ ಜತೆ ಹೆಜ್ಜೆ ಹಾಕಿದ ಎಮ್ಮೆ: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

ನವದೆಹಲಿ: ತನ್ನ ಒಡತಿ ಜತೆ ಎಮ್ಮೆಯೊಂದು ಡ್ಯಾನ್ಸ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದವರ ಮುಖದಲ್ಲಿ ನಗು ಮೂಡುವುದು ಖಂಡಿತ.

ಹಾಸ್ಯಾತ್ಮಕ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಹಿಮಾಚಲ ಪ್ರದೇಶದ ಗ್ರಾಮವೊಂದರಲ್ಲಿ ಸೆರೆಹಿಡಿಯಲಾಗಿದ್ದು, ಎಮ್ಮೆಯ ಹೆಜ್ಜೆಗೆ ಎಲ್ಲರೂ ಫಿದಾ ಆಗುವುದು ಗ್ಯಾರೆಂಟಿಯಾಗಿದೆ.

ಕೋಣನ ಮುಂದೆ ಕಿನ್ನರಿ ಬಾರಿಸಿದರೆ ಪ್ರಯೋಜನವಿಲ್ಲ ಎಂಬ ಹಿರಿಯರ ಮಾತಿದೆ. ಆದರೆ, ಈ ವಿಡಿಯೋ ಆ ಮಾತನ್ನು ಸುಳ್ಳಾಗಿಸಿದೆ. ಒಡತಿಯು ಹಾಡುತ್ತಾ ಹೆಜ್ಜೆ ಹಾಕಿದರೆ, ಎಮ್ಮೆಯು ಸಹ ಮೇಲೆ ಕೆಳಗೆ ಜಿಗಿಯುವ ಮೂಲಕ ಒಡತಿಯ ನೃತ್ಯಕ್ಕೆ ಸಾಥ್​ ನೀಡಿದೆ.

ಇದೀಗ ವಿಡಿಯೋ ವೈರಲ್​ ಆಗಿದ್ದು, ನೋಡಿದವರು ಮುಗುಳ್ನಗುತ್ತಾ ಮೆಚ್ಚುಗೆಯ ಕಾಮೆಂಟ್​ ಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್​)