ನ್ಯೂಸ್

ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ! ಭಾರತ- ಬಾಂಗ್ಲಾ ಗಡಿ ಬಂದ್​, ಬಿಎಸ್​ಎಫ್ ಪಡೆ ಹೈಅಲರ್ಟ್​

ಮೋಹನ್​ ಶೆಟ್ಟಿ

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗ ಮೀಸಲಾತಿ ನೀತಿ ವಿರೋಧಿಸಿ ಜನರ ಆಕ್ರೋಶ ತೀವ್ರ ಭುಗಿಲೆದ್ದಿದ್ದು, ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆಗೆ ಪಟ್ಟುಹಿಡಿದು, ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿಂಸಾತ್ಮಕ ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಧಾನಿ ಶೇಖ್​ ಹಸೀನಾ, ತಮ್ಮ ಪಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ದೇಶದಿಂದ ಪಲಾಯನ ಮಾಡಿದ್ದಾರೆ.

ಪ್ರಧಾನಿಗಳ ಅಧಿಕೃತ ನಿವಾಸವನ್ನು ಏಕಾಏಕಿ ಪ್ರವೇಶಿಸಿದ ನೂರಾರು ಪ್ರತಿಭಟನಾಕಾರರು, ಮನೆಯೊಳಗೆ ಇರಿಸಲಾಗಿದ್ದ ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿದ್ದಲ್ಲದೇ, ಇನ್ನಿತರ ಬೆಲೆಬಾಳುವ ಐಟಂಗಳನ್ನು ಧ್ವಂಸಗೊಳಿಸಿದ್ದಾರೆ. ಇದೀಗ ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರವಾಗುತ್ತಿದ್ದಂತೆ ಭಾರತ ಮತ್ತು ಬಾಂಗ್ಲಾ ಗಡಿಭಾಗದಲ್ಲಿ ಹೈಅಲರ್ಟ್​ ಆಗಿರುವ ಗಡಿ ಭದ್ರತಾ ಪಡೆ (ಬಿಎಸ್​ಎಪ್​) 500 ಮೀಟರ್​​ ಹಿಂದೆಯೇ ವಾಹನಗಳನ್ನು ತಡೆದು, ವಾಪಾಸ್ ಹೋಗುವಂತೆ ಆದೇಶಿಸುತ್ತಿದ್ದಾರೆ.

ಭಾರತ-ಬಾಂಗ್ಲಾದೇಶ ಪೆಟ್ರಾಪೋಲ್ ಗಡಿಯನ್ನು ಈಗಾಗಲೇ ಮುಚ್ಚಲಾಗಿದ್ದು, ಭಾರತದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದ ಎಲ್ಲ ಲಾರಿ ಚಾಲಕರಿಗೂ ತಮ್ಮ ವಾಹನಗಳನ್ನು ಹಿಂತಿರುಗಿಸುವಂತೆ ಬಿಎಸ್‌ಎಫ್ ತಿಳಿಸಿದೆ. ಈ ಮೂಲಕ ಭಾರತಕ್ಕೆ ವಾಪಾಸ್ ಕಳಿಸಿದೆ. ಪೆಟ್ರಾಪೋಲ್ ಗಡಿಯಿಂದ 500 ಮೀಟರ್ ದೂರದಲ್ಲಿಯೇ ವಾಹನ ನಿಲ್ಲಿಸಿ, ಎಚ್ಚರಿಕೆ ನೀಡಲಾಗಿದೆ,(ಏಜೆನ್ಸೀಸ್).