

ಲಂಡನ್: ಇಂಗ್ಲೆಂಡ್ ಕ್ರಿಕೆಟ್ನ ಹೆಸರಾಂತ, ದಿಗ್ಗಜ ಆಟಗಾರ ಗ್ರಹಾಂ ಥೋರ್ಪ್ ಇಂದು ನಿಧನರಾದರು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. 55 ವರ್ಷ ವಯಸ್ಸಿನವರಾಗಿದ್ದ ಮಾಜಿ ಟೆಸ್ಟ್ ಬ್ಯಾಟರ್ ಥೋರ್ಪ್ ಮೃತಪಟ್ಟ ಸುದ್ದಿ ಕೇಳಿ ಬಹಳ ನೋವಾಗಿದೆ ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಗ್ಗುಲ ದೇವಾಲಯದಲ್ಲಿ ಶ್ರಾವಣ ಮಾಸ ಪೂಜಾ ಕಾರ್ಯಕ್ರಮ
ಥೋರ್ಪ್ ಸಾವಿನ ಸುದ್ದಿ ತಿಳಿದು ಭಾರೀ ಆಘಾತ ಉಂಟಾಗಿದೆ. ಈ ಕಠಿಣ ಪರಿಸ್ಥಿತಿಯನ್ನು ವಿವರಿಸಲು ಸೂಕ್ತ ಪದಗಳಿಲ್ಲ. ಅವರ ಕ್ರಿಕೆಟ್ ಕೌಶಲ್ಯದ ಬಗ್ಗೆ ಎರಡು ಮಾತಿಲ್ಲ. 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಯಲ್ಲಿ ಗ್ರಹಾಂ ಮಾಡಿದ ಸಾಧನೆಗಳು ತಮ್ಮ ತಂಡದಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಟೀಮ್ ಪ್ಲೇಯರ್ ಆಗಿ ಆಡಿದ ನಂತರ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡಕ್ಕೆ ಕೋಚ್ ಸ್ಥಾನದಲ್ಲಿ ನಿಂತು ಮುನ್ನಡೆಸಿದ್ದ ಅವರು, ಎಲ್ಲಾ ಫಾರ್ಮೆಟ್ಗಳಲ್ಲಿಯೂ ಜಯ ತಂದುಕೊಟ್ಟಿದ್ದರು ಎಂದು ಇಸಿಬಿ ಗುಣಗಾನ ಮಾಡಿದೆ.
ಸ್ಟೈಲಿಶ್ ಎಡಗೈ ಬ್ಯಾಟರ್ ಆಗಿದ್ದ ಥೋರ್ಪ್, ಇಂಗ್ಲೆಂಡ್ ಪರ 100 ಟೆಸ್ಟ್ಗಳಲ್ಲಿ 6,744 ರನ್ ಗಳಿಸಿದ್ದಾರೆ. 44.66 ಸರಾಸರಿಯಲ್ಲಿ 16 ಶತಕಗಳನ್ನು ಬಾರಿಸಿರುವ ಗ್ರಹಾಂ, ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಪತ್ನಿ, ಮಕ್ಕಳು ಮತ್ತು ತಮ್ಮ ತಂದೆಯನ್ನು ಅಗಲಿದ ಗ್ರಹಾಂ ಥೋರ್ಪ್ಗೆ ಸಂತಾಪ ಸೂಚಿಸಿದ ಕ್ರಿಕೆಟ್ ಗಣ್ಯರು, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).