ಇಸ್ರೇಲ್: ಎರಡು ಮತ್ತು ಆರು ವರ್ಷ ವಯಸ್ಸಿನ ಇಬ್ಬರು ಸಹೋದರರು ಇಸ್ರೇಲ್‌ನ ರಾಮತ್ ಗನ್‌ನಲ್ಲಿ ಗಾಂಜಾ ತುಂಬಿದ ಬಿಸ್ಕೆಟ್ಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಸ್ವಸ್ಥಗೊಂಡ ಇಬ್ಬರು ಸಹೋದರರನ್ನು ರಾಮತ್ ಗನ್‌ನ ಟೆಲ್ ಹಾಶೋಮರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಗಾಂಜಾ ತುಂಬಿದ ಬಿಸ್ಕೆಟ್ಗಳನ್ನು ಸೇವಿಸಿದ ಮಕ್ಕಳು ತಲೆ ಸುತ್ತಿ ಬಿದ್ದಿದ್ದಾರೆ. ಕಿರಿಯ ಮಗು ಅರ್ಧ ಬಿಸ್ಕೆಟ್ ತಿಂದರೆ, ದೊಡ್ಡವನು ಸಂಪೂರ್ಣ ಬಿಸ್ಕೆಟ್ನ್ನು ತಿಂದಿದ್ದಾನೆ. ಆರು ವರ್ಷದ ಮಗು ಸಾಧಾರಣ ಸ್ಥಿತಿಯಲ್ಲಿದ್ದು, ಎರಡು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಕ್ಕಳ ತಾಯಿ ಹೇಳಿದ್ದಾರೆ.
ಆದರೆ ಈ ಗಾಂಜಾ ಬಿಸ್ಕೆಟ್ಗಳು ಮಕ್ಕಳ ಕೈಗೆ ಹೇಗೆ ಸಿಕ್ಕಿವೆ ಮತ್ತು ಗಾಂಜಾ ಬಿಸ್ಕೆಟ್ ತಂದಿದ್ದು ಯಾರು ಎನ್ನುವ ಮಾಹಿತಿ ಇಲ್ಲ.
ಗಾಂಜಾದ ಖಾದ್ಯ ಸೇವನೆ ಮಕ್ಕಳಿಗೆ ಹಾನಿಕಾರಕವಾಗಬಹುದು. ಅಂತಹ ಖಾದ್ಯಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡಬೇಕು. ಔಷಧಿಗಳು, ವಿಷಕಾರಿ ಉತ್ಪನ್ನಗಳನ್ನು ಮಕ್ಕಳಿಂದ ಸುರಕ್ಷಿತವಾಗಿ ಬೇರೆಕಡೆ ಸಂಗ್ರಹಿಸಬೇಕು ಎಂದು ಶಿಶುವೈದ್ಯರು ಹೇಳುತ್ತಾರೆ.