ನ್ಯೂಸ್

VIDEO | ಭಾರತದಂತಹ ದೇಶ ಇನ್ನೊಂದಿಲ್ಲ ಎಂದ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್

ನವದೆಹಲಿ: ಭಾರತದಂತಹ ದೇಶ ಮತ್ತೊಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ಬ್ರಿಟಿಷ್ ಬ್ಯೂಟಿ ಹಾಗೂ ದಿ ವಿಲನ್​​ ಸಿನಿಮಾ ನಟಿ ಆಮಿ ಜಾಕ್ಸನ್ ಸ್ವಾತಂತ್ರ್ಯ ದಿನಚರಣೆಯ ಶುಭ ಕೋರಿ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

ದಿ ವಿಲನ್​ ಸಿನಿಮಾ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಭಾರತವನ್ನು ಉದ್ದೇಶಿಸಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. “ಮದರಾಸಿಪಟ್ಟಣಂ ಚಿತ್ರದಲ್ಲಿ ನಟಿಸುವಾಗ ಸುಂದರ ಭಾರತವನ್ನು ನೋಡಿದೆ. ಆ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟ ಲೇಖಕ ಹಾಗೂ ನಿರ್ದೇಶಕ ವಿಜಯ್ ಅವರಿಗೆ ನಾನು ಚಿರ ಋಣಿ. ಆ ಸಿನಿಮಾ ಅವಕಾಶ ನನ್ನ ವೃತ್ತಿಜೀವನಕ್ಕೆ ಕಿಕ್ ಸ್ಟಾರ್ಟ್ ಆಗಿತ್ತು. ಅಂದಿನಿಂದ ಭಾರತ ನನ್ನ ಎರಡನೇ ಮನೆಯಾಗಿದೆ. ಇಲ್ಲಿನ ಸ್ನೇಹಿತರು ನನಗೆ ಕುಟುಂಬದ ಸದಸ್ಯರಾಗಿದ್ದಾರೆ. ಈ ದೇಶವು ನನಗೆ ಅಸಂಖ್ಯಾತ ಅನುಭವಗಳನ್ನು ಮತ್ತು ನೆನಪುಗಳನ್ನು ನೀಡಿದೆ. ಭಾರತದಂತಹ ದೇಶ ಇನ್ನೊಂದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು'' ಎಂದು ಭಾವುಕರಾಗಿ ಇನ್​​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತವನ್ನು ಹೊಗಳಿ ಪೋಸ್ಟ್ ಮಾಡಿರುವ ಆಮಿ ಜಾಕ್ಸನ್ ಬ್ರಿಟನ್ ಪ್ರಜೆ. ಹೀಗಾಗಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಇನ್ನು ಆಮಿ ಕೆರಿಯರ್ ವಿಚಾರಕ್ಕೆ ಬಂದರೆ ರಜನಿಕಾಂತ್, ವಿಜಯ್, ರಾಮ್ ಚರಣ್, ವಿಕ್ರಮ್, ಸುದೀಪ್, ಧನುಷ್ ಮುಂತಾದ ಸ್ಟಾರ್ ಹೀರೋಗಳ ಜತೆ ನಟಿಸಿದ್ದಾರೆ. ಈ ನಟಿ ಪೋಸ್ಟ್​ಗೆ ಅನೇಕರು ಮೆಚ್ಚಿಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.

ಬ್ರಿಟನ್ ನ ಸುಂದರಿ ಆಮಿ ಜಾಕ್ಸನ್.. ತಮಿಳು ನಾಯಕ ಆರ್ಯ ಅವರ ‘ಮದರಾಸೀಪಟ್ಟಣಂ’ (1947: ತೆಲುಗಿನಲ್ಲಿ ಎ ಲವ್ ಸ್ಟೋರಿ) ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಇಲ್ಲಿನ ಪ್ರೇಕ್ಷಕರಿಗೆ ಪರಿಚಯವಾದರು. ಈ ಚಿತ್ರ ಒಳ್ಳೆಯ ಯಶಸ್ಸನ್ನು ತಂದುಕೊಟ್ಟಿತು. ಆ ನಂತರ ಹಿಂದಿ, ತೆಲುಗು, ಕನ್ನಡ ಭಾಷೆಗಳಲ್ಲಿ ಅವಕಾಶಗಳು ಬರತೊಡಗಿದವು. ಸದ್ಯ ಅವರು ಅರುಣ್ ವಿಜಯ್ ಅಭಿನಯದ ತಮಿಳಿನ 'ಮಿಷನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.