ನ್ಯೂಸ್

VIDEO| ನೋಡ ನೋಡುತ್ತಿದ್ದಂತೆ ಇಬ್ಬರನ್ನು ನುಂಗಿದ ನೀರಾನೆ!

Webdesk - Manjunatha B

ಉಗಾಂಡ: ನಾವುಗಳು ಕೆರೆ, ಕಾಲುವೆಗಳಲ್ಲಿ ಈಜಲು ಹೋದಾಗ ಎಷ್ಟು ಜಾಗರೂಕರಾಗಿರಬೇಕೆಂದು ಎಲ್ಲರಿಗೂ ತಿಳಿದಿರುತ್ತದೆ. ಕೆಲವೊಮ್ಮೆ ಅಜಾಗರೂಕತೆಯಿಂದ ಪ್ರಾಣ ಕಳೆದುಕೊಳ್ಳುವ ಸಂಭವಗಳು ಹೆಚ್ಚಿರುತ್ತವೆ.

ಈಜಲು ಹೋಗುವ ಕೆರೆಗಳಲ್ಲಿ ಮೊಸಳೆ ಹಾಗೂ ಇನ್ನಿತರೆ ಪ್ರಾಣಿಗಳು ಇರುವುದರ ಬಗ್ಗೆ ಅರಿವಿರುತ್ತದೆ ಮತ್ತು ಅಂತಹ ಪ್ರದೇಶಗಳಲ್ಲಿ ಹೆಚ್ಚಾಗಿ ಯಾರು ಸುಳಿಯುವುದಿಲ್ಲ.

ಗುಳುಂ ಎಂದು ನುಂಗಿದ ನೀರಾನೆ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿದ್ದು ನೀರಾನೆಯೊಂದು ಈಜಲು ಹೋಗಿದ್ದ ಮೂವರು ಹುಡುಗರ ಪೈಕಿ ಇಬ್ಬರನ್ನು ಗುಳುಂ ಎಂದು ನುಂಗಿರುವ ಘಟನೆ ನಡೆದಿದೆ.

ಘಟನೆಯೂ ಆಫ್ರಿಕಾ ಖಂಡದ ಉಗಾಂಡದಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ ಮತ್ತು ನೀರಾನೆಯಿಂದ ಜಜ ತಪ್ಪಿಸಿಕೊಂಡು ಓಡುತ್ತಿರುವುದನ್ನು ಕಾಣಬಹುದು.

ಉಗುಳಿದ ನೀರಾನೆ

ವಿಡಿಯೋದಲ್ಲಿ ಕಂಡು ಬಂದೊರುವ ಹಾಗೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೂ ನೀರಾನೆ ಕಂಡ ತಕ್ಷಣ ಭಯದಿಂದ ಮಕ್ಕಳೊಂದಿಗೆ ಓಡುತ್ತಾನೆ.

ನಂತರ ನೀರಾನೆಗೆ ಕಲ್ಲಿ ಹಾಗು ಕಟ್ಟಿಗೆಯಿಂದ ಹೊಡೆದು ನುಂಗಿದ್ದ ಇಬ್ಬರನ್ನು ಹೊರಗಡೆ ಉಗುಳುವಂತೆ ಮಾಡಿ ಮಕ್ಕಳ ಪ್ರಾಣ ಕಾಪಾಡಿದ್ಧಾರೆ.

ಸದ್ಯ ಆ ವ್ಯಕ್ತಿಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತವಾಗಿದ್ದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿದ್ದಾರೆ.