More

    VIDEO| ಹಣಕಾಸು ವಿವಾದ; ಭಾರತ ಮೂಲದ ಬ್ಯಾಂಕ್​ ಉದ್ಯೋಗಿ​ ಹತ್ಯೆ

    ಕಂಪಾಲಾ: ಕರ್ತವ್ಯನಿರತ ಪೊಲೀಸ್​ ಪೇದೆಯೊಬ್ಬರು ಭಾರತೀಯ ಮೂಲದ ಬ್ಯಾಂಕ್​ ಕೆಲಸಗಾರರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಗಾಂಡದ ರಾಜಧಾನಿ ಕಂಪಾಲಾದಲ್ಲಿ ನಡೆದಿದೆ.

    ಘಟನೆ ಮೇ 12ರಂದು ನಡೆದಿದ್ದು ಮೃತ ದುರ್ದೈವಿಯನ್ನು ಉತ್ತಮ್​ ಭಂಡಾರಿ(39) ಎಂದು ಗುರುತಿ ಹಿಡಿಯಲಾಗಿದ್ದು ಇವಾನ್ ವಾಬ್ವೈರ್(30) ಎಂದು ಗುರುತು ಹಿಡಿಯಲಾಗಿದೆ.

    ಮನಸ್ತಾಪ

    ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಆರೋಪಿ ದುರ್ದೈವಿ ಮೇಲೆ ಹಲವು ಸುತ್ತು ಗುಂಡು ಹಾರಿಸುವುದು ಕಂಡು ಬರುತ್ತದೆ.

    TFS ಬ್ಯಾಂಕ್​ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಭಂಡಾರಿ ಹಾಗೂ ಪೊಲೀಸ್​ ಪೇದೆ ವಾಬ್ವೈರ್ ನಡುವೆ ಹಣಕಾಸು ಪಾವತಿ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ವಿವಾಹಿತೆ ಜೊತೆ ಕಾಣಿಸಿಕೊಂಡ ಪ್ರಿಯಕರ; ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ ಗ್ರಾಮಸ್ಥರು

    ಗುಂಡಿಕ್ಕಿ ಹತ್ಯೆ

    ಶುಕ್ರವಾರ ಮೇ 12ರಂದು ಆರೋಪಿ ವಾಬ್ವೈರ್ ಬ್ಯಾಂಕಿಗೆ ಭೇಟಿ ನೀಡಿದ ವೇಳೆ ಭಂಡಾರಿ 2.1ಮಿಲಿಯನ್​ ಶಿಲ್ಲಿಂಗ್​(46,000 ಸಾವಿರ ರೂಪಾಯಿ) ಸಾಲದ ಮೊತ್ತದ ಬಗ್ಗೆ ತಿಳಿಸಿದ್ದಾರೆ.

    ಈ ವೇಳೆ ಭಂಡಾರಿ ಅವರೊಂದಿಗೆ ಜಗಳ ತೆಗೆದ ಆರೋಪಿ ಮಾತನಾಡುವ ವೇಳೆ ಎಕೆ-47 ರೈಫಲ್​ನೊಂದಿಗೆ ಗುಂಡಿಕ್ಕಿ ಅವರನ್ನು ಹತ್ಯೆ ಮಾಡಿದ್ದಾನೆ.

    ಮಾನಸಿಕ ಸ್ಥಿತಿ ಸರಿ ಇಲ್ಲ

    ಈ ಕುರಿತು ಪ್ರತಿಕ್ರಿಯಿಸಿರುವ ಕಂಪಾಲಾ ಮೆಟ್ರೋಪಾಲಿಟನ್​ ಪೊಲೀಸ್​ ವಕ್ತಾರ ಪ್ಯಾಟ್ರಿಕ್​ ಆನ್​ಯಾಂಗೋ ಆರೋಪಿ ಕೆ-47 ರೈಫಲ್​ ಕದ್ದು ಬ್ಯಾಂಕ್​ ನಿರ್ದೇಶಕ ಭಂಡಾರಿ ಅವರನ್ನು ಹತ್ಯೆ ಮಾಡಿದ್ಧಾನೆ.

    ಆರೋಪಿಯ ಮಾನಸಿಕ ಸ್ಥಿತಿ ಸರಿ ಇಲ್ಲದ ಕಾರಣ ಆತನಿಗೆ ಐದು ವರ್ಷಗಳ ಹಿಒಂದೆ ಬಂದೂಕು ನೀಡದಂತೆ ಆದೇಶ ಹೊರಡಿಸಲಾಗಿತ್ತು. ಹಾಗಿದ್ದರೂ ಗನ್​​ ಕಳವು ಮಾಡಿ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts