More

    ಮೊದಲ ಎರಡು ವರ್ಷ ಸಿಎಂ ಸ್ಥಾನ ಕೊಡಿ, ಇಲ್ಲಾಂದ್ರೆ ಏನೂ ಬೇಡ: ಡಿ.ಕೆ. ಶಿವಕುಮಾರ್​

    ನವದೆಹಲಿ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.

    ಇನ್ನು ಸರ್ಕಾರ ರಚನೆ ಸರ್ಕಸ್​ ದೆಹಲಿ ತಲುಪಿದ್ದು ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್​ ಹೈ ಕಮಾಂಡಿಗೆ ಕಗ್ಗಂಟ್ಟಾಗಿ ಪರಿಣಮಿಸಿದೆ.

    ಪಟ್ಟು ಸಡಿಲಿಸದ ನಾಯಕರು

    ಇನ್ನು ಕಾಂಗ್ರೆಸ್​ ಸರ್ಕಾರ ರಚಿಸಲಿರುವ ಬೆನ್ನಲ್ಲೇ ಮುಖ್ಯಮಂತ್ರಿ ರೇಸ್​ನಲ್ಲಿ ರಾಜ್ಯ ನಾಯಕರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಮುಖವಾಗಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

    ಇನ್ನು ಕಾಂಗ್ರೆಸ್​ ಹೈಕಮಾಂಡ್​ ಈ ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು ಈ ಇಬ್ಬರು ನಾಯಕರು ತಮ್ಮ ಪಟ್ಟು ಸಡಿಲಿಸದಂತೆ ಕಾಣುತ್ತಿದ್ದಾರೆ.

    ಮೊದಲ ಎರಡು ವರ್ಷ ಸಿಎಂ ಸ್ಥಾನ ಕೊಡಿ, ಇಲ್ಲಾಂದ್ರೆ ಏನೂ ಬೇಡ: ಡಿ.ಕೆ. ಶಿವಕುಮಾರ್​

    ನನಗೆ ಏನೂ ಬೇಡ

    ಇನ್ನು ಕಾಂಗ್ರೆಸ್​ ಹೈಕಮಾಂಡ್​ ಬಳಿ ಮಾತನಾಡಿರುವ ಡಿಕೆಶಿ ನನಗೆ ಮೊದಲ ಎರಡು ವರ್ಷ ಸಿಎಂ ಸ್ಥಾನ ಕೊಡುವುದಾದರೆ ಕೊಡಿ. ಇಲ್ಲವಾದರೆ ನನಗೆ ಏನೂ ಬೇಡ ಎಂದು ಗುಡುಗಿದ್ದಾರೆ.

    ಶಾಸಕ ಸ್ಥಾನವೂ ಬೇಡ. ನನ್ನ ಪಾಡಿಗೆ ನಾನಿರುವೆ. ನಾನು ವ್ಯವಹಾರಸ್ಥ, ವ್ಯವಹಾರ ಮಾಡಿಕೊಂಡಿರುವೆ ಎಂದು ಹೈಕಮಾಂಡ್​ ಬಳಿ ಡಿಕೆಶಿ ಖಡಕ್​ ಆಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಹಿಂದುತ್ವ ಧರ್ಮವಲ್ಲ, ಬಜರಂಗದಳ ಗೂಂಡಾಗಳ ಗುಂಪು: ದಿಗ್ವಿಜಯ್​ ಸಿಂಗ್​

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಸುರೇಶ್​ ನಮ್ಮಣ್ಣ ಯಾವುದೇ ಕಾರಣಕ್ಕೂ ಜಗ್ಗಲ್ಲ ಹಿಂದೇನೂ ಜಗ್ಗಿಲ್ಲ ಈಗಲೂ ಅಷ್ಟೇ ಎಂದು ತಮ್ಮ ಸಹೋದರನ ಪರ ಬ್ಯಾಟ್​ ಬೀಸಿದ್ದಾರೆ.

    ಪ್ರತ್ಯೇಕ ಸಭೆ

    ಇನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮುಖ್ಯಮಂತ್ರಿ ಆಕಾಂಕ್ಷಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುವ ಮೂಲಕ ಇಬ್ಬರು ನಾಯಕರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಇವರಿಬ್ಬರು ಯಾವುದೇ ಕಾರಣಕ್ಕೂ ಜಗ್ಗುವ ಮಾತಿಲ್ಲ ಎಂದು ತಿಳಿಸಿದ್ದಾರೆ.

    ಇನ್ನು ಸಂಜೆ 5:00 ಘಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿ.ಕೆ. ಶಿವಕುಮಾರ್​ ಹಾಗಗೂ 6:00 ಘಂಟೆಗೆ ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts