ಹಿಂದುತ್ವ ಧರ್ಮವಲ್ಲ, ಬಜರಂಗದಳ ಗೂಂಡಾಗಳ ಗುಂಪು: ದಿಗ್ವಿಜಯ್​ ಸಿಂಗ್​

digvijay singh
Published on

ನವದೆಹಲಿ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಇನ್ನು ರಾಷ್ಟ್ರದಾದ್ಯಂತ ಕಾಂಗ್ರೆಸ್​ ನಾಯಕರು ದಕ್ಷಿಣ ಭಾರತದಲ್ಲಿ ಬಿಜೆಪಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ ಇತ್ತ ಪಕ್ಷದ ಹಿರಿಯ ನಾಯಕರೊಬ್ಬರು ವಿವಾದಾತ್ಮ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಹಿಂದುತ್ವ ಧರ್ಮವೇ ಅಲ್ಲ

ಹಿರಿಯ ಕಾಂಗ್ರೆಸ್​ ನಾಯಕ, ಮಾಜಿ ಕೇಂದ್ರ ಸಚಿವ ದಿಗ್ವಿಜಯ್​ ಸಿಂಗ್​ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಹಿಂದುತ್ವ ಒಂದು ಧರ್ಮ ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ಧರ್ಮವನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅಂತಹವರ ಮೇಲೆ ದಾಳಿ ಮಾಡುವುದನ್ನು ಹಿಂದೂ ಧರ್ಮ ಒಳಗೊಂಡಿರುತ್ತದೆ.

ಸಾಮರಸ್ಯ ಹಾಗು ಜನರ ಕಲ್ಯಾಣವನ್ನು ಭೋಧಿಸುವ ಸನಾತನ ಧರ್ಮದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ಧಾರೆ.

ಗೂಂಡಾಗಳ ಗುಂಪು

ಮಾತನಾಡುವ ವೇಳೆ ಬಜರಂಗದಳವನ್ನು ಗುಂಡಾಗಳ ಗುಂಪು ಎಂದು ಸಂಬೋಧಿಸಿರುವ ದಿಗ್ವಿಜಯ ಸಿಂಗ್​ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಇದನ್ನು ಬಳಸುತ್ತಿರುವುದಕ್ಕೆ ವಿಷಾದಿಸಿದ್ದಾರೆ.

ಬಜರಂಗದಳವನ್ನು ಆಂಜನೇಯನ ಜೊತೆ ಹೋಲಿಕೆ ಮಾಡಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಇದೇ ಗೂಂಡಾಗಳು ಜಬಲ್​ಪುರದಲ್ಲಿರುವ ಕಾಂಗ್ರೆಸ್​ ಕಚೇರಿಗೆ ನು್ಗ್ಇ ಧ್ವಂಸ ಮಾಡಿದಾಗ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net