ನ್ಯೂಸ್

'₹15 ಲಕ್ಷದ ಡೈಮೆಂಡ್​ ರಿಂಗ್​ ತಂದ್ಕೊಟ್ರೆ, ಅದರ ಬಗ್ಗೆನೇ ಅನುಮಾನ ಪಟ್ಟು ನನ್ನ ಬಿಟ್ಟೋದ್ಲು'

ಲಂಡನ್​: ಅನುಮಾನ ಒಳ್ಳೆಯದಲ್ಲ. ಕೆಲವೊಮ್ಮೆ ಅನುಮಾನದಿಂದಲೇ ಸಂಸಾರ ಒಡೆದುಹೋಗಿದ್ದನ್ನೂ ನೀವು ಕೇಳಿರುತ್ತೀರಿ. ಆದರೆ ಈ ಕಥೆ ಸ್ವಲ್ಪ ಡಿಫರೆಂಟ್​. ನನ್ನೊಂದಿಗಿರ್ತೀಯಾ ಅಂತ ಪ್ರೇಮ ನಿವೇದನೆ ಮಾಡಿದ ಪ್ರಿಯಕರ ತಂದಿದ್ದ ಡೈಮೆಂಡ್​ ಬಗ್ಗೆನೇ ಅನುಮಾನ ಪಟ್ಟ ಯುವತಿ ಪ್ರೀತಿಯನ್ನೇ ತಿರಸ್ಕರಿಸಿ ಹೋಗಿದ್ದಾಳೆ.

ಹೌದು. ಇಂತದ್ದೊಂದು ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಅದರ ಬಗ್ಗೆ ಸ್ವತಃ ನೊಂದ ಪ್ರೇಮಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾನೆ. 15 ಲಕ್ಷ ರೂಪಾಯಿ ಕೊಟ್ಟು, ಲ್ಯಾಬ್​ನಲ್ಲಿ ಮಾಡಿದ ಡೈಮೆಂಡ್ ರಿಂಗ್​ ತೆಗೆದುಕೊಂಡು ಬಂದೆ. ನೈಸರ್ಗಿಕ ಡೈಮೆಂಡ್​ ಇಂದ ಪರಿಸರಕ್ಕೆ ಹಾನಿಯಾಗುತ್ತೆ ಎನ್ನುವ ಕಾರಣಕ್ಕೆ ಲ್ಯಾಬ್​ನಲ್ಲಿ ತಯಾರಾರ ಡೈಮೆಂಡ್​ ಮೊರೆ ಹೋದೆ.

ಆದರೆ ನನ್ನ ಹುಡುಗಿಗೆ ಅದು ದೊಡ್ಡ ತಪ್ಪಾಗಿ ಕಂಡಿತು. ಪ್ರೀತಿಸಿದವಳಿಗೆ ಒಂದು ನೈಸರ್ಗಿಕ ಡೈಮೆಂಡ್​ ರಿಂಗ್​ ಕೊಡುವ ಯೋಗ್ಯತೆ ಇಲ್ಲವೇ ಎಂದು ಹೇಳಿ ಪ್ರೀತಿಯನ್ನು ತಿರಸ್ಕರಿಸಿ ಹೋಗಿಬಿಟ್ಟಳು ಎಂದು ಆತ ಬರೆದುಕೊಂಡಿದ್ದಾನೆ. ಯಾವ ಯಾವುದೋ ಕಾರಣಕ್ಕೆ ಪ್ರೀತಿ ನಿರಾಕರಿಸುವವರ ಎದುರು ಈ ಘಟನೆ ಒಂದು ರೀತಿಯ ವಿಚಿತ್ರವಾಗಿ ಹೊರಹೊಮ್ಮಿದೆ.

ನೊಂದ ಪ್ರೇಮಿಯ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್)