ನ್ಯೂಸ್

ಆಟ ಆಡುತ್ತ ಫಿಟ್ಸ್ ಬಂದು ಈಜುಗೊಳಕ್ಕೆ ಬಿದ್ದು ಸಾವಿಗೀಡಾದ ಯುವಕ

ವಿಜಯಪುರ: ಆಟವಾಡುತ್ತಿದ್ದ ಹುಡುಗ ಫಿಟ್ಸ್ ಬಂದು ಈಜುಗೊಳಕ್ಕೆ ಬಿದ್ದು ಸಾವಿಗೀಡಾದ ಪ್ರಕರಣವೊಂದು ನಡೆಯಿತು. ವಿಜಯಪುರ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಘಟನೆಯೊಂದು ಸಂಭವಿಸಿದೆ.

ವಿಜಯಪುರದ ಬಾಗಲಕೋಟ ರಸ್ತೆಯಲ್ಲಿರುವ ಸ್ವಿಮ್ಮಿಂಗ್ ಪೂಲ್​ನಲ್ಲಿ ಈ ಘಟನೆ ನಡೆದಿದೆ. ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಂಭಾಜಿ ಮಲ್ಲಪ್ಪ ಜಾಧವ (15) ಸಾವಿಗೀಡಾದ ಯುವಕ.

ಆಟವಾಡುತ್ತಿದ್ದ ಈತ ಮೂರ್ಛೆ ಹೋಗಿ ಈಜುಗೊಳಕ್ಕೆ ಬಿದ್ದು ಮುಳುಗಿ ಸಾವಿಗೀಡಾಗಿದ್ದಾನೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.