ನ್ಯೂಸ್

ರೈಲಿನ ಚಕ್ರಗಳ ಮಧ್ಯೆ ಸಿಲುಕಿದ ಅಸಹಾಯಕ ಬಾಲಕ! 100 ಕಿ.ಮೀವರೆಗೆ ಪ್ರಯಾಣ…

ಭಾನುವಾರ (ಏಪ್ರಿಲ್ 21) ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ಸರಕು ಸಾಗಣೆ ರೈಲಿನ ಬಳಿ ಆಟವಾಡುತ್ತಿದ್ದ ಬಾಲಕನೊಬ್ಬ ಅರಿವಿಗೆ ಬಾರದೆ ರೈಲಿನ ಚಕ್ರದಡಿ ಕುಳಿತ್ತಿದ್ದಾನೆ. ಈ ವೇಳೆ ರೈಲು ಚಲಿಸಿದ್ದು, ನೂರು ಕಿಲೋಮಿಟರ್​ಗೂ ಹೆಚ್ಚು ದೂರ ವೀಲ್​ಗಳ ಮಧ್ಯೆಯೇ ಕುಳಿತು ಪ್ರಯಾಣಿಸಿರುವುದು ರೈಲ್ವೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸದ್ಯ ಮಗುವು ಸುರಕ್ಷಿತವಾಗಿದ್ದೇ ಆದರೂ ಚಕ್ರದ ನಡುವೆ ಸಿಲುಕಿಕೊಳ್ಳಲು ಕಾರಣವೇನು ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಉತ್ತರ ಪ್ರದೇಶದ ರೈಲ್ವೇ ಹಳಿಗಳ ಬಳಿ ವಾಸಿಸುತ್ತಿದ್ದ ಬಾಲಕ ರೈಲು ಚಲಿಸಲು ಸ್ಥಳದಿಂದ ಹೊರಡುವ ಮುನ್ನ ಅದರಡಿ ಆಟವಾಡುತ್ತಿದ್ದ ಎಂದು ಹೇಳಲಾಗಿದೆ. ಈ ವೇಳೆ ರೈಲು ಹೊರಟಿರುವುದು ಮಗುವಿನ ಗಮನಕ್ಕೆ ಬಂದಿಲ್ಲ. ಬದಲಿಗೆ ಆಟವಾಡುತ್ತಲ್ಲೇ ಚಕ್ರದ ನಡುವೆ ಸಿಲುಕಿಕೊಂಡಿದ್ದಾನೆ. ಹಾಗೆಯೇ ಕುಳಿತ ಬಾಲಕ ಸುಮಾರು 100 ಕಿಮೀ.ಗೂ ಹೆಚ್ಚು ದೂರ ಪ್ರಯಾಣಿಸಿದ್ದಾನೆ. ಹಳಿಯ ಮಧ್ಯೆ ಎಲ್ಲಿಯೂ ಆಯಾತಪ್ಪಿ ಬೀಳದ ಬಾಲಕ, ಸುರಕ್ಷಿತವಾಗಿ ಕುಳಿತ್ತದ್ದು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ ಶಾಕ್ ತಂದಿದೆ.

ಬಾಲಕನನ್ನು ಅಂತಿಮವಾಗಿ ಹರ್ದೋಯ್‌ ನಿಲ್ದಾಣದಲ್ಲಿ ಆರ್​ಪಿಎಫ್ ಅಧಿಕಾರಿಗಳು ರಕ್ಷಿಸಿದ್ದು, ಬಿಸಿಲಿನ ಶಾಖದ ನಡುವೆಯೂ ಬಾಲಕ ರೈಲಿನ ವೀಲ್‌ಸೆಟ್‌ನ ನಡುವೆ ಹೇಗೆ ಕುಳಿತ್ತಿದ್ದ ಎಂಬುದೇ ಆಶ್ಚರ್ಯ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಅಂತಿಮವಾಗಿ ದಣಿದ ಬಾಲಕನನ್ನು ಹರ್ದೋಯಿಯಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).