ನ್ಯೂಸ್

ಹಾಟ್​ ಬ್ಯೂಟಿ ಎಂದು ಗುರುತಿಸಿಕೊಳ್ಳುವ ಮುನ್ನ ಈಕೆ ನಟಿಸಿದ ಮೊದಲ ಚಿತ್ರ ಬ್ಲಾಕ್​ಬಸ್ಟರ್​! ಪಾತ್ರ ಮರೆಯಲಾಗದು | Hot Beauty

ಮೋಹನ್​ ಶೆಟ್ಟಿ

ಮುಂಬೈ: ಭಾರತೀಯ ಚಿತ್ರೋದ್ಯಮದಲ್ಲಿ ಯಾವ ಚಿತ್ರರಂಗಕ್ಕೆ ಬಂದರೂ ನಷ್ಟವಿಲ್ಲ. ಒಳ್ಳೆಯ ಕಥಾಹಂದರ, ನೋಡುಗರಿಗೆ ಹಿತವೆನ್ನಿಸುವ ಚಿತ್ರಗಳ ಮುಖೇನ ಪ್ರೇಕ್ಷಕರ ಮುಂದೆ ಹಾಜರಾಗುವುದು ಮೊದಲ ಸವಾಲು. ಆ ಸವಾಲನ್ನು ಗೆದ್ದು, ನೋಡುಗರ ಮೆಚ್ಚುಗೆ, ಪ್ರಶಂಸೆಗೆ ಪಾತ್ರರಾದರೆ, ಖಂಡಿತ ಗೆಲುವು ಶತಸಿದ್ಧ. ಈ ಸಾಲಿಗೆ ಇಂದು ಅನೇಕ ಯುವ ನಟ-ನಟಿಯರು ಸೇರ್ಪಡೆಗೊಂಡಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು, ಅದ್ಭುತ ಯಶಸ್ಸನ್ನು ಕಂಡವರು, ಕೇವಲ ಚಿತ್ರೋದ್ಯಮದಲ್ಲಿ ಮುಂದುವರಿಯುವುದು ಮಾತ್ರವಲ್ಲ, ಇಂದಿಗೂ ತಮ್ಮ ಮೊದಲ ಪಾತ್ರದಿಂದಲೇ (Hot Beauty) ಗುರುತಿಸಿಕೊಳ್ಳುತ್ತಾರೆ.

ಆ ಪಟ್ಟಿಯಲ್ಲಿ ಬಾಲಿವುಡ್​ನ ಈ ಹಾಟ್​ ಬೆಡಗಿ ಕೂಡ ಇದ್ದಾರೆ. ಅಂದು ಭಾರತದ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್​ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಪಡೆದ ಈಕೆ, ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡು, ಬಹಳ ಸರಳ ಅಭಿನಯ, ಡೈಲಾಗ್​ಗಳಿಂದಲೇ ಸಿನಿಪ್ರಿಯರ ಹೃದಯ ಗೆದ್ದರು. ಆ ನಟಿ ಬೇರಾರು ಅಲ್ಲ ಇಂದು ನೋಡುಗರ ಹುಬ್ಬೇರಿಸುವಂತಹ ಹಾಟ್​ ಬೆಡಗಿ ದಿಶಾ ಪಟಾನಿ. ಎಂ.ಎಸ್. ಧೋನಿ ಅವರ ಪ್ರೇಯಸಿ ಪ್ರಿಯಾಂಕಾ ಪಾತ್ರವನ್ನು ನಿಭಾಯಿಸಿದ ದಿಶಾ, ಮುದ್ದು ಮಾತುಗಳಿಂದಲೇ ಚಿತ್ರರಸಿಕರ ಗಮನಸೆಳೆದಿದ್ದರು.

3 ಕೋಟಿ ರೂ. ಸಂಭಾವನೆ

ಈ ಚಿತ್ರದ ಬಳಿಕ ಹಲವಾರು ನಟರೊಂದಿಗೆ ಅಭಿನಯಿಸಿದ ದಿಶಾ, ಕಾಣಿಸಿಕೊಂಡಿದ್ದೆಲ್ಲ ಹಾಟ್​ ಆಗಿಯೇ. 'ಎಂ.ಎಸ್. ಧೋನಿ ದಿ ಅನ್​ಟೋಲ್ಡ್​ ಸ್ಟೋರಿ' ಚಿತ್ರವನ್ನು ಹೊರತುಪಡಿಸಿದರೆ, ಬಹುತೇಕ ಚಿತ್ರಗಳಲ್ಲಿ ಅವರ ಲುಕ್​ಗಳು ಬಹಳ ಹಾಟ್​ ಆಗಿರುವುದನ್ನು ಸಿನಿಪ್ರೇಕ್ಷಕರು ನೋಡಿದ್ದಾರೆ. ಸದ್ಯ ಬಾಲಿವುಡ್​ ಅಂಗಳದ ಹಾಟ್​ ನಟಿ ಎಂದೇ ಕರೆಸಿಕೊಳ್ಳುವ ದಿಶಾ ಪಟಾನಿ, ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ನಟಿಸಿರುವ 'ಕಂಗುವ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕೆ ಆಕೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

'ಮಲಂಗ್ 2'

'ಕಂಗುವ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಇದೀಗ ತಮಿಳು ಚಿತ್ರರಂಗದಕ್ಕೆ ಪದಾರ್ಪಣೆ ಮಾಡಿರುವ ದಿಶಾ, ಈ ಹಿಂದೆ ನಿರ್ದೇಶಕ ಸುಂದರ್ ಸಿ ಅವರ 'ಸಂಗಮಿತ್ರ' ಚಿತ್ರದ ಮುಖಾಂತರ ಕಾಲಿವುಡ್​ಗೆ ಎಂಟ್ರಿ ಕೊಡಬೇಕಿತ್ತು. ಆದರೆ, ಈ ಸಿನಿಮಾ ರಿಲೀಸ್​ ದಿನಾಂಕದಿಂದ ಸದ್ಯ ದೂರ ಉಳಿದ ಹಿನ್ನಲೆ ಕಂಗುವ ಮೊದಲು ಬಿಡುಗಡೆ ಕಂಡಿದೆ. ಪ್ರಸ್ತುತ ಬಾಲಿವುಡ್​ನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಸಾಗುತ್ತಿರುವ ದಿಶಾ, ಮುಂಬರುವ 'ಮಲಂಗ್ 2' ಚಿತ್ರದ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ,(ಏಜೆನ್ಸೀಸ್).