'ರಾಮ ಶಾಮ ಭಾಮ' ಖ್ಯಾತಿಯ ನಟಿ Urvashi ಮಗಳನ್ನು ನೋಡಿದ್ದೀರಾ? ಅಮ್ಮನನ್ನೂ ಮೀರಿಸುವ ಸುಂದ್ರಿ

Urvashi
Published on

ಮುಂಬೈ: ( Urvashi ) ಒಂದು ಕಾಲದಲ್ಲಿ ನಾಯಕಿಯರಾಗಿ ಮಿಂಚಿದ್ದವರಲ್ಲಿ ನಟಿ ಊರ್ವಶಿ ಕೂಡ ಒಬ್ಬರು. ಚಿತ್ರರಂಗದಲ್ಲಿ ವಿಶೇಷ ಹೆಸರು ಮಾಡಿರುವ ಊರ್ವಶಿ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ. ನಟಿಯ ಮಗಳು ಕೂಡಾ ಅಷ್ಟೆ ಸುಂದರವಾಗಿದ್ದಾಳೆ.

ಊರ್ವಶಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 700 ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಈಗ ಊರ್ವಶಿ ತಂಗಿ,ಅತ್ತಿಗೆ, ತಾಯಿ ಪಾತ್ರಗಳಿಗೆ ಸರಿ ಹೊಂದುತ್ತಾರೆ. ನಟಿಯಾಗಿ ಸಾಕಷ್ಟು ಖ್ಯಾತಿ ಗಳಿಸಿರುವ ಊರ್ವಶಿ ಅವರ ಕುಟುಂಬದ ವಿಷಯಗಳು ಹೊರಜಗತ್ತಿಗೆ ಅಷ್ಟಾಗಿ ತಿಳಿದಿಲ್ಲ.

ಊರ್ವಶಿ 2000 ರಲ್ಲಿ ಮಲಯಾಳಂ ನಟ ಮನೋಜ್ ಜೈನ್ ಅವರನ್ನು ವಿವಾಹವಾದರು. ಅವರ ಮಗಳು ತೇಜ ಲಕ್ಷ್ಮಿ ಜನಿಸಿದಳು. ನಂತರ ಮನೋಜ್ ಜೊತೆಗಿನ ಸಂಬಂಧ ಮುರಿದುಬಿತ್ತು.  ಮದುವೆಯಾದ 8 ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದಿದ್ದಾರೆ.  ಈ ಹಿರಿಯ ನಟಿಗೆ ಒಬ್ಬ ಮಗಳಿದ್ದಾಳೆ. ಈಕೆಯ ಹೆಸರು ತೇಜ ಲಕ್ಷ್ಮಿ.. ಸಿನಿಮಾಗೆ ಕಾಲಿಡದಿದ್ದರೂ.. ಈಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾಳೆ. ಮಗಳು ತೇಜಲಕ್ಷ್ಮಿ ತಂದೆ ಮನೋಜ್ ಜೊತೆ ವಾಸವಾಗಿದ್ದಾರೆ. 2013ರಲ್ಲಿ ಊರ್ವಶಿ ಶಿವಪ್ರಸಾದ್ ಅವರನ್ನು ಮರುಮದುವೆಯಾದ್ರು, 43ನೇ ವಯಸ್ಸಿನಲ್ಲಿ ಮಗನಿಗೆ ಜನ್ಮ ನೀಡಿದ್ರು.

ಮಗಳು ತೇಜ ಲಕ್ಷ್ಮಿಯ ಜತೆ ಇರುವ ಫೋಟೋಗಳನ್ನು   ಊರ್ವಶಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿವೆ. ಫೋಟೋಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಈಕೆಗೆ ನಾಯಕಿಯಾಗಲು ಇಷ್ಟವಿಲ್ಲ. ಈ ಹಿಂದೆ ಹೀರೋಯಿನ್ ಆಗಬೇಕೆಂಬ ಆಸೆಯಿದ್ದರೂ ಈಗ ಆ ನಿರ್ಧಾರ ಬದಲಿಸಿದ್ದಾರೆ. ಕಿಕ್ ಬಾಕ್ಸಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ನಟಿ ಊರ್ವಶಿ ಪ್ರೇಮಲೋಕ, ನ್ಯೂ ಡೆಲ್ಲಿ, ಹಬ್ಬ, ಜೀವನದಿ, ಯಾರಿಗೆ ಸಾಲುತ್ತೆ ಸಂಬಳ, ಕೋತಿಗಳು ಸಾರ್‌ ಕೋತಿಗಳು, ಕತ್ತೆಗಳು ಸಾರ್‌ ಕತ್ತೆಗಳು, ರಾಮ ಶಾಮ ಭಾಮ ಸೇರಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2016ರಲ್ಲಿ ಜಗ್ಗುದಾದ, ಅದಾದ ಬಳಿಕ 2018ರಲ್ಲಿನ ಸುರ್‌ ಸುರ್‌ ಬತ್ತಿ ಚಿತ್ರವೇ ಕೊನೇ, ಅಲ್ಲಿಂದ ಈ ವರೆಗೂ ಅವರು ಕನ್ನಡ ಸಿನಿಮಾಗಳತ್ತ ಮುಖ ಮಾಡಿಲ್ಲ. ತಮಿಳು, ತೆಲುಗು, ಮಲಯಾಳಂನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net