ನ್ಯೂಸ್

ನಾನು, ಇರ್ಫಾನ್​ ಪಠಾಣ್​ ಪ್ರೀತಿಸುತ್ತಿದ್ದೆವು! ಗೌತಮ್​ ಗಂಭೀರ್​ ಯಾವಾಗಲೂ ಮಿಸ್​ ಕಾಲ್​ ಕೊಡುತ್ತಿದ್ದರು ಎಂದ ಮಾದಕ ಚೆಲುವೆ​

ಕನ್ನಡದ ‘ವರ್ಷಧಾರೆ’ ಸೇರಿ ಐದಾರು ಹಿಂದಿ, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಪಾಯಲ್ ಘೋಷ್, ಕಳೆದ ಕೆಲ ವರ್ಷಗಳಿಂದ ಖಾಲಿ ಕುಳಿತಿದ್ದಾರೆ. ಹೀಗಾಗಿಯೇ ಪ್ರಚಾರಕ್ಕೆ ಬರಲು ಹೊಸ ಹೊಸ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಬೌಲರ್ ಮೊಹಮ್ಮದ್ ಶಮಿಯನ್ನು ಮದುವೆಯಾಗುವುದಾಗಿ ಟ್ವೀಟಿಸಿದ್ದ ಪಾಯಲ್, ಇದೀಗ ಇರ್ಫಾನ್​ ಪಠಾಣ್ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘2011ರಿಂದ ನಾನು, ಇರ್ಫಾನ್​ ಡೇಟ್ ಮಾಡುತ್ತಿದ್ದೆವು. ಆ ಸಮಯದಲ್ಲೇ ಗೌತಮ್ ಗಂಭೀರ್, ನಟ ಅಕ್ಷಯ್ ಕುಮಾರ್ ಕೂಡ ನನ್ನ ಹಿಂದೆ ಬಿದ್ದಿದ್ದರು. ಗೌತಮ್ ಗಂಭೀರ್ ನನಗೆ ಯಾವಾಗಲೂ ಮಿಸ್ ಕಾಲ್ ಕೊಡುತ್ತಿದ್ದರು. ಆ ವಿಷಯ ಇರ್ಫಾನ್​ಗೂ ತಿಳಿಸಿದ್ದೆ. ಐದು ವರ್ಷಗಳ ಬಳಿಕ ನಾನು, ರ್ಇಾನ್ ದೂರವಾದೆವು. ನಂತರ ಅನಾರೋಗ್ಯಕ್ಕೊಳಗಾಗಿ ಹಲವು ವರ್ಷಗಳ ಕಾಲ ನಾನು ಚಿತ್ರರಂಗದಿಂದ ದೂರವಿದ್ದೆ. ಇರ್ಫಾನ್​ ಬಳಿಕ ನಾನು ಮತ್ತೆ ಯಾರನ್ನೂ ಪ್ರೀತಿಸಿಲ್ಲ’ ಎಂದು ಪಾಯಲ್ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಪಾಯಲ್ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಂದು ಇರ್ಫಾನ್​ ಮತ್ತು ಗಂಭೀರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Actress Payal Ghosh @ 65th Jio Filmfare Awards (South) 2018 Photos