ನ್ಯೂಸ್

ಬಿಜೆಪಿ-ಜೆಡಿಎಸ್ ಪಕ್ಷಗಳನ್ನು KD ಎಂದು ಹೊಸ ಮೈತ್ರಿ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್​

ಬೆಂಗಳೂರು: ಇಂದು ನವದೆಹಲಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿ ಎನ್​ಡಿಎ ಜೊತೆ ಜೆಡಿಎಸ್​ ಮೈತ್ರಿ ನಿರ್ಧಾರವನ್ನು ಘೋಷಿಸಿದ್ದಾರೆ. ಇದರ ಬೆನ್ನಿಗೇ ಇತ್ತ ಕಾಂಗ್ರೆಸ್ ಈ ಹೊಸ ಮೈತ್ರಿ ವಿರುದ್ಧ ಕಿಡಿ ಕಾರಿದೆ.

ಜೆಡಿಎಸ್ ಇಂದು ಅಧಿಕೃತವಾಗಿ ಎನ್​ಡಿಎ ಮೈತ್ರಿಕೂಟದೊಳಗೆ ವಿಲೀನವಾಗಿದೆ, ಇನ್ಮುಂದೆ ಜೆಡಿಎಸ್​ ಪಕ್ಷವು ತನ್ನ ಹೆಸರಿನ ಮುಂದಿರುವ ಸೆಕ್ಯೂಲರ್ ಪದ ಕೈಬಿಡುವುದು ಒಳ್ಳೆಯದು. ಜೆಡಿಎಸ್​ ಬದಲು ಕೇವಲ ಜೆಡಿ ಎಂದು ಇರಿಸಿಕೊಳ್ಳಬಹುದು ಎಂದು ಕಾಂಗ್ರೆಸ್​ ಹೇಳಿದೆ.

ಜೆಡಿಎಸ್​ ತನ್ನ ಹೆಸರನ್ನು ಜೆಡಿ ಅಥವಾ ಕೆಡಿ (KD) ಎಂದು ಕೂಡ ಬದಲಿಸಿಕೊಳ್ಳಬಹುದು, ಕೆಡಿ ಅಂದರೆ ಅಪಾರ್ಥ ಬೇಡ, KD ಅಂದರೆ “ಕಮಲ ದಳ” ಎಂದು ವ್ಯಾಖ್ಯಾನ ಮಾಡಿರುವ ಕಾಂಗ್ರೆಸ್, ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನೇ ವಿಸರ್ಜಿಸಿದ್ದಾರೆ, ಅಭಿನಂದನೆಗಳು ಎಂದೂ ವ್ಯಂಗ್ಯವಾಡಿದೆ.