ನ್ಯೂಸ್

ಅದೇನು ಅಂಗಡಿಯಲ್ಲಿ ಸಿಗುವ ಕಾ... ಜಗದೀಶ್​ ಕುರಿತು Bigg Boss ಸ್ಫರ್ಧಿ ಧನರಾಜ್​ ಹೇಳಿಕೆ ವೈರಲ್​

ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಬಿಗ್​ಬಾಸ್ (Bigg Boss)​ 11ನೇ ಆವೃತ್ತಿಯು ಶುರುವಾಗಿ ಒಂದು ವಾರಗಳಿದ್ದು, ನಿರೂಪಕ ಕಿಚ್ಚ ಸುದೀಪ್​ ನಡೆಸಿಕೊಡುವ ಚಾರದ ಕತೆಯ ಮೊದಲ ಸಂಚಿಕೆ ಶನಿವಾರ (ಅಕ್ಟೋಬರ್​ 05) ಪ್ರಸಾರವಾಗಿದೆ. ಎರಡನೇ ಸಂಚಿಕೆಯು ಭಾನುವಾರ (ಅಕ್ಟೋಬರ್​ 06) ಪ್ರಸಾರವಾಗಲಿದ್ದು, ಮೊದಲ ದಿನ ಸ್ಫರ್ಧಿಗಳಿಗೆ ಭರ್ಜರಿ ಕ್ಲಾಸ್​ ತೆಗೆದುಕೊಂಡಿದ್ದ ಸುದೀಪ್(Sudeep)​ ಎರಡನೇ ದಿನ ಜಾಲಿ ಮೂಡ್​ನಲ್ಲಿರುವುದನ್ನು ನೋಡಬಹುದಾಗಿದೆ. ಈ ಕುರಿತಾದ ಪ್ರೋಮೋ (Promo ಬಿಡುಗಡೆಯಾಗಿದ್ದು, ಸಖತ್​ ವೈರಲ್​ ಆಗಿದೆ.

ಒಂಟಿ ಮನೆ ಮೃಗಾಲಯವಾದ್ರೆ ಎಂಬ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ನಿರೂಪಕ ಕಿಚ್ಚ ಸುದೀಪ್ (Kichcha Sudeep)​ ಸ್ಫರ್ಧಿಗಳು ಮಾಡುತ್ತಿರುವ ತಮಾಷೆಗೆ ಬಿದ್ದು ಬಿದ್ಉದ ನಗುತ್ತಿರುವುದನ್ನು ನೋಡಬಹುದಾಗಿದೆ. ಮನೆಯ ಸ್ಪರ್ಧಿಗಳಿಗೆ ಯಾವ ಪ್ರಾಣಿಯನ್ನು ಹೋಲಿಸಬಹುದು ಎಂಬ ಪ್ರಶ್ನೆ ಸುದೀಪ್ ಕೇಳಿದ್ದು, ಅದಕ್ಕೆ ಉತ್ತರಿಸಿದ ಧನರಾಜ್ (Dhanaraj), ಐಶ್ವರ್ಯಾ ಶಿಂಧೋಗಿ (Aishwarya Shindogi) ಅವರನ್ನು ಆನೆಗೆ, ಯಮುನಾ ಶ್ರೀನಿಧಿ (Yamuna Srinidhi) ಅವರನ್ನು ಜಿಂಕೆಗೆ ಹೋಲಿಸಿದ್ದಾರೆ. ಜಗದೀಶ್​ ಅವರನ್ನು ಊಸರವಳ್ಳಿಗೆ ಹೋಲಿಸಿರುವ ಧನರಾಜ್​ ಅವರು ಒಮ್ಮೆ ಚಾನೆಲ್​ಅನ್ನೇ ಖರೀದಿಸುತ್ತೇನೆ ಎನ್ನುತ್ತಾರೆ. ಇನ್ನೊಮ್ಮೆ ಇಡೀ ವಿಶ್ವವನ್ನೇ ಖರೀದಿಸುತ್ತೇನೆ ಎಂದು ಹೇಳುತ್ತಾರೆ. ಅದೇನು ಅಂಗಡಿಯಲ್ಲಿ ಸಿಗುವ ಒಳಉಡುಪಾ ಎಂದು ಹೇಳುತ್ತಾರೆ. ಧನರಾಜ್​ ಅವರ ಕಾಮಿಡಿಗೆ ನಿರೂಪಕ ಕಿಚ್ಚ ಸುದೀಪ್​ ಸೇರಿದಂತೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು, ಜಗದೀಶ್​ ಅವರು ಸಹ ನಕ್ಕಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ವಾರದ ಕತೆ ಕಿಚ್ಚಿನ ಜೊತೆಯ ಮೊಲದ ಸಂಚಿಕೆಯಲ್ಲಿ ಸ್ಫರ್ಧಿಗಳಾದ ಹಂಸ ಪ್ರತಾಪ್​ ಹಾಗೂ ಜಗದೀಶ್​ ಅವರಿಗೆ ಭರ್ಜರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದ ಕಿಚ್ಚ ಸುದೀಪ್​ ಎರಡನೇ ದಿನವೂ ಅದನ್ನು ಮುಂದುವರೆಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಎರಡನೇ ದಿನ ಸಂಪೂರ್ಣ ಭಿನ್ನವಾಗಿದ್ದು, ಅಂತಿವಾಗಿ ಸಂಚಿಕೆ ಪ್ರಸಾವಾಗುವವರೆಗೂ ಕಾದು ನೋಡಬೇಕಿದೆ. ಶನಿವಾರ ಭವ್ಯಾ ಹಾಗೂ ಮಾನಸಾ ಸೇಫ್​ ಆಗಿದ್ದು, ಗೌತಮಿ, ಜಾಧವ್, ಶಿಶಿರ್​ ಶಾಸ್ತ್ರಿ, ಜಗದೀಶ್​, ಯಮುನಾ ಶ್ರೀನಿಧಿ, ಹಂಸ ಪ್ರತಾಪ್​, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಎಲಿಮಿನೇಷನ್​ ಕಣದಲ್ಲಿದ್ದಾರೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್ (Bigg Boss)​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್​ ಆಗಿದೆ.