ನ್ಯೂಸ್

Google Pay, PhonePe ಬಳಕೆದಾರರಿಗೆ ಬಿಗ್​ ಶಾಕ್​​; ಇನ್ಮುಂದೆ UPI ಗೂ ಶುಲ್ಕ ಪಾವತಿಸಬೇಕಂತೆ!

Google Pay, PhonePe: ಇಂದಿನ ಅತ್ಯಾಧುನಿಕ ಯುಗದಲ್ಲಿ ಫೋನ್​ ಪೇ ಸೇರಿದಂತೆ ಎಲ್ಲಾ ರೀತಿಯ ಪೇಗಳಲ್ಲಿ(Digital Pay) ಬಳಸುವ UPI (Unified Payments Interface)  ಗೂ ಕೂಡ ಇನ್ಮುಂದೆ ಕಮರ್ಷಿಯಲ್​ ಆಗಲಿದ್ದು, ಎಲ್ಲಿಯಾದರೂ ಪೇ ಮಾಡಬೇಕಾದ್ರೆ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿದೆ.

ಹೌದು, ಪೋನ್​ನಂತೆ ಯುಪಿಐ ಕೂಡ ನಮ್ಮ ಜೀವನದ ಅಂಗವಾಗಿದೆ. ಒಬ್ಬ ವ್ಯಕ್ತಿಯೂ ದೈನಂದಿನ ವಹಿವಾಟಿನ ಶೇ.60 ರಿಂದ 80ರಷ್ಟು ಯುಪಿಐ ಮೂಲಕ ಪಾವತಿ ಮಾಡುತ್ತಾನೆ. ಭಾರತದಲ್ಲಿ ಪ್ರತಿದಿನ ಕೋಟ್ಯಾಂತರ ಯುಪಿಐ ವಹಿವಾಟುಗಳು ನಡೆಯುತ್ತವೆ. Paytm, Google Pay ಮತ್ತು PhonePe ಹೆಚ್ಚು ಬಳಸಲ್ಪಡುತ್ತವೆ. ಈ ಕಂಪನಿಗಳಲ್ಲಿ ಹೆಚ್ಚಿನವು UPI ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ಈಗ ಈ ಉಚಿತ ಸೇವೆಗಳು ಶೀಘ್ರದಲ್ಲೇ ನಿಲ್ಲಬಹುದು. ಈಗ ನೀವು ವಿವಿಧ ಸೇವೆಗಳಿಗೆ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ವರದಿ ಉಲ್ಲೇಖವಾಗಿದೆ.

ಈ ಕಂಪನಿಗಳು ಈಗಾಗಲೇ UPI ಮೂಲಕ ಮೊಬೈಲ್​ ರಿಚಾರ್ಚ್​ ಮಾಡಲು ಶುಲ್ಕ ವಿಧಿಸಿದೆ. ಈ ಪ್ರಕ್ರಿಯೆ ಆರಂಭವಾಗಿದ್ದು, ಇದು ಮೊಬೈಲ್ ರಿಚಾರ್ಚ್​ಗೆ ಸೀಮಿತವಾಗಿಲ್ಲ. ಗೂಗಲ್​ ಅದನ್ನು ಪ್ರಾರಂಭಿಸಿದೆ. ಇನ್ನು ಎಕನಾಮಿಕ್​ ಟೈಮ್ಸ್​ ವರದಿಯ ಪ್ರಕಾರ, ವಿದ್ಯುತ್​​ ಬಿಲ್​ ಪಾವತಿಸಲು ಗೂಗಲ್​ ಪೇ ಅನುಕೂಲಕರನ ಶುಲ್ಕದ ಹೆಸರಲ್ಲಿ ಗ್ರಾಹಕರಿಂದ 15 ರೂ. ವಿಧಿಸಿದೆ. ವರದಿಯ ಪ್ರಕಾರ, ಬಳಕೆದಾರರು ಕ್ರೆಡಿಟ್​ ಕಾರ್ಡ್​ ಬಳಸಿ ಗೂಗಲ್​ ಪೇ ಮೂಲಕ ವಿದ್ಯುತ್​ ಬಿಲ್​ ಪಾವತಿಸಿದ್ದಾರೆ.

ಗೂಗಲ್ ಪೇ ಈ ಪ್ರಕ್ರಿಯೆಯನ್ನು "ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ" ಇದರಲ್ಲಿ ಜಿಎಸ್‌ಟಿ ಸೇರಿದೆ ಎಂದು ವಿವರಿಸಿದೆ. ಇನ್ನು UPI ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರವಲ್ಲದೆ ಇತರ ಹಲವು ಸೇವೆಗಳಿಗೂ ಬಳಸಲಾಗುತ್ತಿದೆ.(ಏಜೆನ್ಸೀಸ್​)