ನ್ಯೂಸ್

ಸುಶಾಂತ್​ ಸಿಂಗ್​ ರಜಪೂತ್​ ಹೆಸರಲ್ಲಿ ಸೇವೆಗೆ ಮುಂದಾದ ಬಾಲಿವುಡ್​ ನಟಿ ...

ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆ ಸಡಿಲಗೊಂಡಿದೆ. ಬಡವರ ಬೆನ್ನಿಗೆ ನಿಂತ ಎಷ್ಟೋ ಮಂದಿ, ಆಹಾರ ವಿತರಣೆ ಮಾಡಿದ್ದಾರೆ. ದಿನಸಿ ಪದಾರ್ಥ ಹಂಚಿಕೆ ಮಾಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಆರ್​ಜೆ ಮಯೂರ್​, ರಾಗಿಣಿ, ರೂಪಿಕಾ, ಪ್ರಣೀತಾ, ಅದ್ವಿತಿ, ಅಶ್ವಿತಿ ಹೀಗೆ ಹಲವಾರು ಮಂದಿ ಕೈಲಾದ ಸಹಾಯ ಮಾಡಿದ್ದಾರೆ. ಕ್ವಿಂಟಾಲ್​ಗಟ್ಟಲೇ ಅಡುಗೆ ಸಿದ್ಧಪಡಿಸಿ, ಮನೆ ಮನೆಗೆ ತೆರಳಿ ವಿತರಣೆ ಮಾಡಿಬಂದಿದ್ದಾರೆ. ಬಾಲಿವುಡ್​ನಲ್ಲಿಯೂ ಅಂಥ ಹಲವು ಕಾರ್ಯಗಳಾಗಿವೆ. ಇದೀಗ ಅದೇ ಕೆಲಸ ಮತ್ತೆ ಶುರುಮಾಡಿದ್ದಾರೆ ಬಾಲಿವುಡ್​ ನಟಿ ಭೂಮಿ ಪಡ್ನೇಕರ್​. ಅದರಲ್ಲಿ ಒಂದು ವಿಶೇಷವಿದೆ.

ಹೌದು, ಭೂಮಿ ಪಡ್ನೇಕರ್​, ಏಕ್​ ಸಾಥ್​ ಹೆಸರಿನ ಸೇವಾ ಸಂಸ್ಥೆಯ ಜತೆ ಕೈ ಜೋಡಿಸಿದ್ದು, ಆ ಫೌಂಡೇಷನ್​ ವತಿಯಿಂದ 550ಕ್ಕೂ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಅಂದಹಾಗೆ, ಅಭಿಷೇಕ್​ ಕಫೂರ್​ ಪತ್ನಿ ಪ್ರಜ್ಞ ಈ ಫೌಂಡೇಷನ್​ ನಡೆಸುತ್ತಿದ್ದು, ಈಗಾಗಲೇ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಂಬೈನ ಹಲವು ಸ್ಲಂ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಅವಶ್ಯಕ ವಸ್ತುಗಳನ್ನು ನೀಡಿ ಬಂದಿದ್ದಾರೆ.

ಇದೀಗ ಭೂಮಿ ಪಡ್ನೇಕರ್​, ಇತ್ತಿಚೆಗಷ್ಟೇ ಅಗಲಿದ ಸುಶಾಂತ್​ ಸಿಂಗ್​ ನೆನಪಲ್ಲಿ 550ಕ್ಕೂ ಅಧಿಕ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಿ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ಸುಶಾಂತ್​ ಸಿಂಗ್​ ಚಿರಸ್ಥಾಯಿಯಾಗಿ ಉಳಿಯಬೇಕೆಂಬ ನಿಟ್ಟಿನಲ್ಲಿ ಪಾಟ್ನಾದ ಮನೆಯನ್ನು ಸ್ಮಾರಕ ಮಾಡುವ ಯೊಝನೆ ನಡೆಯುತ್ತಿದೆ. ಅದೇ ರೀತಿ ಸುಶಾಂತ್​ ಸಾವಿನ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆಯೂ ಬಿಡುಸಾಗಿದೆ. (ಏಜೆನ್ಸೀಸ್​)