ನ್ಯೂಸ್

ಸ್ಕೂಲ್ ವ್ಯಾನ್​ನಲ್ಲಿ ಹೋಗಿ ಟ್ರ್ಯಾಪ್ ಮಾಡಿದ ಪೊಲೀಸರು; ಸಿಕ್ಕಿಬಿದ್ದ 'ಪಿಸ್ತೂಲ್'!

ಬೆಂಗಳೂರು: ಪೊಲೀಸರ ಮೋಸ್ಟ್​ ವಾಂಟೆಡ್ ಲೀಸ್ಟ್​​ನಲ್ಲಿದ್ದ ಆರೋಪಿ ಆಸೀಫ್ ಅಲಿಯಾಸ್ ಪಿಸ್ತೂಲ್​ನನ್ನು ಬಂಧಿಸುವಲ್ಲಿ ಅಶೋಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಸೀಫ್ ಅಲಿಯಾಸ್ ಪಿಸ್ತೂಲ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ 30ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಆಸೀಫ್ ತಲೆಮರೆಸಿಕೊಂಡಿದ್ದ.

ಪೊಲೀಸರ ಕೈಗೆ ಸಿಕ್ಕಿ ಬೀಳದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆಸೀಫ್ ಹೆಂಡತಿಯ ಜತೆ ಜಗಳವಾಡಿ ಅಶೋಕನಗರ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಆಸೀಫ್ ಕಳ್ಳತನ, ಸುಲಿಗೆ, ಮನೆಗಳ್ಳತನ, ಸರಗಳ್ಳತನ ಸೇರಿದಂತೆ ಸಿಕ್ಕ ಸಿಕ್ಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.

ಇತ್ತೀಚೆಗೆ ಆಸೀಫ್ ಹೆಂಡತಿಯ ಜತೆ ಜಗಳವಾಡಿ ದೂರವಾಗಿದ್ದ. ಆರೋಪಿಗೆ ಒಬ್ಬಳು ಮಗಳಿದ್ದು, ಆಕೆಯನ್ನು ನೋಡಲು ಶಾಲೆಗೆ ಹೋಗುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಆಸೀಫ್​ನನ್ನು ಬಂಧಿಸಲು ಪ್ಲಾನ್ ರೂಪಿಸಿದ್ದರು. ಅದರಂತೆ ಆರೋಪಿಯ ಮಗಳ ಸ್ಕೂಲ್​ ವ್ಯಾನ್​ನಲ್ಲಿ ಸಾಮಾನ್ಯರಂತೆ ಹೋದ ಪೊಲೀಸರು, ಆಸಿಫ್ ಅಲಿಯಾಸ್​ ಪಿಸ್ತೂಲ್​ನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.