ನ್ಯೂಸ್

'ಹಾಸಿಗೆಗಳು ಮಲಗಲು ಮಾತ್ರ'; ಪತ್ನಿ ಪ್ರಿಯಾಂಕಾ ಜತೆಗಿನ ಬೆಡ್‌ರೂಮ್‌ ಸೀಕ್ರೆಟ್ ಹರಿಬಿಟ್ಟ ನಿಕ್ ಜೋನಾಸ್| Nick Jonas

Nick Jonas; ಗಾಯಕ ನಿಕ್ ಜೋನಾಸ್ ಇತ್ತೀಚೆಗೆ ತನ್ನ ಪತ್ನಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ತಮ್ಮ ಮಲಗುವ ಕೋಣೆಯ ಅಭ್ಯಾಸಗಳ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಪತ್ನಿಯೊಟ್ಟಿಗೆ ನಿಕ್‌ ಜೋನಾಸ್ ಮನೆಯಲ್ಲಿ ಹೇಗೆ ಇರುತ್ತಾರೆ. ಅವರ ಬೆಡ್‌ರೂಮ್‌ ನಿಯಮ ಏನು ಎನ್ನುವುದರ ಬಗ್ಗೆ ಜೋನಾಸ್‌ ಪ್ರತಿಕ್ರಿಯಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರು ತಮ್ಮ ಹಾಸಿಗೆಯನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದು, ಹಾಸಿಗೆಗಳು ಮಲಗಲು ಮಾತ್ರ ಎಂದು ನಾನು ಭಾವಿಸುತ್ತೇನೆ. ಹಾಸಿಗೆಯಲ್ಲಿದ್ದಾಗ ತಿನ್ನುವುದು, ಓದುವುದು ಅಥವಾ ದೂರದರ್ಶನ ನೋಡುವುದನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮಲಗುವ ಕೋಣೆಯಲ್ಲಿ ಟಿವಿ ಇದೆ ಆದರೆ ನಾನು ಅದನ್ನು ಹಾಸಿಗೆ ಮೇಲೆ ಕೂತು ನೋಡುವುದಿಲ್ಲ. ಪತ್ನಿ ಟಿವಿ ನೋಡಲು ಬಯಸಿದಾಗ, ನಾನು ಬೇರೆ ಚೇರ್‌ನಲ್ಲಿ ಕೂತು ಟಿವಿ ನೋಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಹಾಸಿಗೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ, ಪ್ರಿಯಾಂಕಾ ಹೆಚ್ಚಾಗಿ ಮಲಗಿಕೊಂಡು ಟಿವಿ ನೋಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.

(ಏಜೆನ್ಸೀಸ್)

ಪ್ರಿಯಾಂಕಾ ಮತ್ತು ನಿಕ್ ಅವರ ದಾಂಪತ್ಯವು ಇನ್ನೂ ಬಲವಾಗಿ ಮುಂದುವರೆದಿದೆ. ಈ ದಂಪತಿಗಳು 2018 ರಲ್ಲಿ ವಿವಾಹವಾದರು. ಇಬ್ಬರೂ ವೃತ್ತಿಜೀವನವನ್ನು ತಮ್ಮ ಕರ್ತವ್ಯಗಳೊಂದಿಗೆ ನಿಭಾಯಿಸುವ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ.

ಇನ್ನೂ ಈ ವಿಡಿಯೋ ಒಬ್ಬೊಬ್ಬರೂ ಕೂಡ ಒಂದೊಂದು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಪ್ರಿಯಾಂಕಾ ಹಾಸಿಗೆಯಲ್ಲಿ ಟಿವಿ ನೋಡುತ್ತಿರುವಾಗ ನೀನು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಹುಚ್ಚುತನ ಎಂದು ಒಬ್ಬರು ಬರೆದಿದ್ದಾರೆ. ಆದರೆ ಇನ್ನೂ ಅನೇಕರು ಅವರ ಮಾತನ್ನು ಒಪ್ಪಿಕೊಂಡಿದ್ದು, ಹಾಸಿಗೆ ಎಂದಿಗೂ ನಿದ್ರೆಗೆ ಮಾತ್ರ ಎಂದು ಹೇಳಿದ್ದಾರೆ.