ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ (BBKS11) ಅದ್ಧೂರಿ ಮನೆಯೊಳಗೆ ಪ್ರವೇಶಿಸಿರುವ 17 ಘಟಾನುಘಟಿ ಸ್ಪರ್ಧಿಗಳ ಮಧ್ಯೆ ಟಾಸ್ಕ್ ಜಗ್ಗಾಟಕ್ಕಿಂತಲೂ ಮಾತಿನ ಜಟಾಪಟಿಯೇ ಜೋರಾಗಿ ಸದ್ದು ಮಾಡುತ್ತಿರುವುದು ವೀಕ್ಷಕರನ್ನು ಅಚ್ಚರಿಗೆ ದೂಡಿದೆ. ಅದರಲ್ಲೂ ಮೊದಲ ವಾರವೇ ಬಿಗ್ ಮನೆಯನ್ನು ರಣರಂಗವನ್ನಾಗಿಸಿದ್ದು ಇತಿಹಾಸ. ನರಕ ಮತ್ತು ಸ್ವರ್ಗ ಎಂಬ ಎರಡು ಗುಂಪಾಗಿ ಒಂದೇ ಸೂರಿನಡಿ ಬದುಕುತ್ತಿರುವ 17 ಸ್ಪರ್ಧಿಗಳಲ್ಲಿ ಇಂದು ದೊಡ್ಡ ವಾಕ್ಸಮರವೇ (Talk Of War) ನಡೆದುಹೋಗಿದೆ.
ಇದನ್ನೂ ಓದಿ: T20 ವಿಶ್ವಕಪ್ 2024 | ಭಾರತದ ಈ ಇಬ್ಬರು ಓಪನಿಂಗ್ ಬ್ಯಾಟರ್ಗಳಿಗೆ ಪಿಚ್ ಸರಿ ಹೊಂದುತ್ತಿಲ್ಲ: ಮಾಜಿ ಕ್ರಿಕೆಟಿಗ
ಒಂದೆಡೆ 16 ಸ್ಪರ್ಧಿಗಳ ವಿರುದ್ಧ ನಿಂತಿದ್ದ ಲಾಯರ್ ಜಗದೀಶ್ ಇದೀಗ ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ತಮ್ಮ ಸೇಫ್ ಗೇಮ್ ಆಡುವಲ್ಲಿ ಸಕ್ರಿಯರಾದರೆ, ಇತ್ತ ಸ್ವರ್ಗ ಮತ್ತು ನರಕನಿವಾಸಿಗಳಲ್ಲಿದ್ದ ಒಗ್ಗಟು ಮುರಿದುಬಿದ್ದಂತೆ ಕಂಡುಬಂದಿದೆ. ಅದಕ್ಕೆ ಕಾರಣ, ಬಿಗ್ ಬಾಸ್ ಕೊಟ್ಟಿರುವ ಹೊಸ ಚಟುವಟಿಕೆ. ಮೇಲ್ನೋಟಕ್ಕೆ ಇಲ್ಲಿ ಸ್ವರ್ಗ ಹಾಗೂ ನರಕನಿವಾಸಿಗಳ ನಡುವೆ ಯಾವುದೇ ಜಟಾಪಟಿ ಅಥವಾ ಟಾಸ್ಕ್ ಅಂತ ನಡೆದಿಲ್ಲ. ಬದಲಿಗೆ ಸ್ವರ್ಗನಿವಾಸಿಗಳಲ್ಲೇ ಈ ವಾಕ್ಸಮರ ನಡೆದಿರುವುದು ನೋಡುಗರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಐಶ್ವರ್ಯ ಶಿಂಧೋಗಿ ಮತ್ತು ಭವ್ಯ ನಡುವಿನ ವಾಕ್ಸಮರ ಬಲು ಜೋರಿದ್ದು, ಇದರ ಪ್ರೋಮೋ ಇದೀಗ ಜಾಲತಾಣಗಳಲ್ಲಿ ಹರಿದಾಡಿದೆ. ಅಸಲಿಗೆ ಯಾರು ಯಾರಿಗೆ ಏನು ಟಕ್ಕರ್ ಕೊಟ್ಟಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಿದೆ.