ನ್ಯೂಸ್

BBKS10: ಕಿಚ್ಚನ ಪಂಚಾಯಿತಿಯಲ್ಲಿ ಯಾರ ಆಟಕ್ಕೆ ಬೀಳಲಿದೆ ಬ್ರೇಕ್​?

ಬೆಂಗಳೂರು: ಕನ್ನಡದ ಬಿಗ್​ ಬಾಸ್​ ಸೀಸನ್​ 10 ಇದೀಗ ಐದನೇ ವಾರದ ಅಂತ್ಯವನ್ನು ತಲುಪಿದ್ದು, ಈ ವಾರ ಬಿಗ್​ ಸ್ಪರ್ಧಿಗಳ ಮಧ್ಯೆ ನಡೆದ ಭರ್ಜರಿ ಪೈಪೋಟಿಯಲ್ಲಿ ಪ್ರತಾಪ್​ ನೇತೃತ್ವದ 'ಗಂಧದಗುಡಿ' ತಂಡ ಜಯಶಾಲಿಯಾಗಿ ಹೊರಹೊಮ್ಮಿತು. ಸಿರಿ ಮುನ್ನಡೆಸಿದ 'ವಜ್ರಕಾಯ' ಹಾಗೂ ಪ್ರತಾಪ್​ ನಾಯಕತ್ವದ 'ಗಂಧದಗುಡಿ' ತಂಡಗಳು ಬಿಗ್​ಬಾಸ್​ ಕೊಟ್ಟ ಟಾಸ್ಕ್​ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇ ಆದರೂ ಸ್ಪರ್ಧಿಗಳ ನಡುವೆ ಬೂದಿ ಮುಚ್ಚಿದ ಕೆಂಡಂತಿದ್ದ ಮನಸ್ತಾಪಗಳು ಅಲ್ಲಲ್ಲಿ ಸ್ಫೋಟಗೊಂಡಿದ್ದು ಸದ್ಯ ವೀಕ್ಷಕರ ಗಮನಕ್ಕೆ ಬಂದಿದೆ.

ಈ ವಾರ ಆಡಿದ ಅಷ್ಟು ಟಾಸ್ಕ್​ಗಳ ಪೈಕಿ ಭಾವನೆಗಳನ್ನು ಹೊರತರುವ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎರಡು ತಂಡಗಳು ಭಾರೀ ಕಸರತ್ತು ನಡೆಸಿತು. ಚೇರಿನಲ್ಲಿ ಕುಳಿತ ತಮ್ಮ ಎದುರಾಳಿ ತಂಡದ ಸ್ಪರ್ಧಿಯ ಮುಖದಲ್ಲಿ ಭಾವನೆ ಹೊರತೆಗೆಯುವ ಭರದಲ್ಲಿ ಆಡಿದ ಮಾತು, ವೈಯಕ್ತಿಕ ವಿಚಾರವನ್ನು ಕೆದಕಿದ ರೀತಿ ನೋಡುವ ವೀಕ್ಷಕರಿಗೆ ಒಂದು ಕ್ಷಣ ಯಾಕೆ ಇಷ್ಟು ವಿಪರೀತ? ಎಂಬ ಪ್ರಶ್ನೆ ಮೂಡಿದ್ದು ಸಹಜ!

ಸದ್ಯ ಈ ವಾರ ಮನೆಯಿಂದ ಹೊರಹೋಗಲು ಸ್ನೇಹಿತ್​, ನಮ್ರತಾ, ಇಶಾನಿ, ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​, ನೀತು ಹಾಗೂ ವರ್ತೂರು ಸಂತೋಷ್​ ನಾಮಿನೇಟ್​ ಆಗಿ, ಹಾಟ್​ ಸೀಟ್​ನಲ್ಲಿ ಕುಳಿತ್ತಿದ್ದಾರೆ. ಇಷ್ಟು ಸ್ಪರ್ಧಿಗಳ ಪೈಕಿ ಯಾರ ಆಟಕ್ಕೆ ಇಂದು ಬ್ರೇಕ್ ಬೀಳಲಿದೆ​? ಯಾರಿಗೆ ಕ್ಲಾಸ್​, ಇನ್ಯಾರಿಗೆ ಚಪ್ಪಾಳೆ ಸಿಗಲಿದೆ? ಎಂಬುದನ್ನು ಇಂದಿನ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.