ನ್ಯೂಸ್

BBKS10: ವಿನಯ್​-ಸಂಗೀತಾ ಜಗಳ​ ಸುಖಾಂತ್ಯ; ಈಗ ಬೆಸ್ಟ್‌ ಫ್ರೆಂಡ್ಸ್ ಮಧ್ಯೆ ಶುರುವಾಯ್ತು ಫೈಟ್​!

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಡುವ ಆಟದಲ್ಲಿ ಕಾಣಬೇಕಿದ್ದ ಪೈಪೋಟಿ ಕೇವಲ ಮಾತಿನಲ್ಲಿ ಕಾಣಿಸುತ್ತಿದೆ.

ಒಬ್ಬರ ಮೇಲೋಬ್ಬರು ಅಸಮಾಧಾನ, ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆಯೇ ವಿನಃ ಆರೋಗ್ಯಕರ ಚರ್ಚೆಗೆ ಆಸ್ಪದವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಸದ್ಯ ದೊಡ್ಡ ಮನೆಯಲ್ಲಿ ಬಿಗ್​ ಜಗಳಕ್ಕೆ ಕಾರಣವಾಗಿದ್ದ ಸಂಗೀತಾ ಮತ್ತು ವಿನಯ್​ ನಡುವೆ ಇದೀಗ ರಾಜಿಯಾಗಿದ್ದು, ಇಬ್ಬರ ಮನಸ್ತಾಪ ಸುಖಾಂತ್ಯ ಕಂಡಿದೆ.

ಇದೀಗ ಬಿಗ್​ ಮನೆಯಲ್ಲಿ ಎಲ್ಲರಿಗೂ ತಿಳಿದಿರುವಂತೆ ಬಹಳ ಬೆಸ್ಟ್​ ಫ್ರೆಂಡ್ಸ್​ ಆಗಿರುವ ಸಂಗೀತಾ ಮತ್ತು ಕಾರ್ತಿಕ್ ನಡುವೆ ಫೈಟ್‌ ನಡೆದಿದೆ. ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ.

ಹೌದು, ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ಚಕಮಕಿ ಮೊದಲಿನಿಂದಲೂ ನಡೆಯುತ್ತಲೇ ಇತ್ತು. ಆಗೆಲ್ಲ ಸಂಗಿತಾಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಕ್ಕೆ ನಿಂತವರು ಕಾರ್ತಿಕ್. ಸದ್ಯ ವಿನಯ್‌ ಮತ್ತು ಸಂಗೀತಾ ರಾಜಿಯಾಗಿದ್ದಾರೆ. ಇದರ ಬೆನ್ನಲ್ಲೇ ಬೆಸ್ಟ್​ ಫ್ರೆಂಡ್ಸ್​ ಫೈಟ್​ ಮಾಡಿಕೊಂಡಿದ್ದಾರೆ.

ಇದುವರೆಗೆ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ಗೆ ಅಸಲಿ ಕಾರಣವೇನು? ಇದು ತಮಾಷೆ ಜಗಳವೇ ಅಥವಾ ಉದ್ದೇಶದಿಂದ ಆಗಿದ್ದ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ಬಿಗ್​ ಬಾಸ್​ ಕನ್ನಡ ಸೀಸನ್​ 10ರ ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾ​ಗುತ್ತಿದೆ.