ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಾಸಭೆಯಲ್ಲಿ ನೀಡಿದ್ದ ಹೇಳಿಕೆ ವಿರುದ್ದ ಉದ್ಯಮಿ ವಿಜಯ್ ಮಲ್ಯ(Vijay Mallya) ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಪಡಿಸಿದ್ದಾರೆ.
ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮೂಲಕ(ಪಿಎಸ್ಬಿ) 14,131 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಲೋಕಾಸಭೆಗೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಿಳಿಸಿದ್ದರು.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದು, 6,203 ಕೋಟಿ ರೂ. ಸಾಲದ ಇರುವುದಾಗಿ ಕೋರ್ಟ್ ತೀರ್ಪು ಕೊಟ್ಟಿದೆ. ಆದರೆ, ಭಾರತದಲ್ಲಿ ನನ್ನ ಆಸ್ತಿಯ ಮೂಲಕ 14,131 ಕೋಟಿ ರೂ.ವಸೂಲಿ ಮಾಡಿದ್ದಾರೆ. ಇದು ಎರಡು ಪಟ್ಟು ಅಲ್ವವೇ?. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬ್ಯಾಂಕ್ ಹೇಗೆ ಅಷ್ಟೋಂದು ವಸೂಲಿ ಮಾಡಿವೆ. ಅಲ್ಲದೇ ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದಿಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ವ್ಲಾಡಿಮಿರ್ಗೆ ಕಿಮ್ ಜಾಂಗ್ ಉನ್ ಸಾಥ್! ಇಷ್ಟೊಂದು ರಿಸ್ಕ್ ಹಿಂದಿನ ಉದ್ದೇಶ ಇದೇನಾ? | Russia
''ತೀರ್ಪಿನ ಋಣಭಾರಕ್ಕಿಂತ ಎರಡು ಪಟ್ಟು ಹೆಚ್ಚು ವಸೂಲಿ ಮಾಡಿದರೂ ನಾನು 'ಅರ್ಥಿಕ ಅಪರಾಧಿ'(economic offender) ಎಂದು ಹಣೆ ಪಟ್ಟಿ ಕಟ್ಟಲಾಗಿದೆ. ಇಡಿ ಮತ್ತು ಬ್ಯಾಂಕ್ಗಳು ಈ ಪ್ರಕ್ರಿಯೆಯನ್ನು ಕಾನೂನನ್ನು ಸಮರ್ಥಿಸದಿದ್ದರೆ ನಾನು ಪರಿಹಾರಕ್ಕೆ ಆರ್ಹನಾಗಿದ್ದೇನೆ'' ಎಂದು ಹೇಳಿದ್ದಾರೆ.
ಕಿಂಗ್ಫಿಷರ್ ಏರ್ಲೈನ್ಸ್ಗೆ ಸಂಬಂಧಿಸಿದಂತೆ ಸಾಲಗಳನ್ನು ಮರು ಪಾವತಿಸಲಾಗದೆ ಮತ್ತು ಹಣಕಾಸಿನಲ್ಲಿ ಆಕ್ರಮ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ 2016ರಲ್ಲಿ ದೇಶದಿಂದ ಪಲಾಯನ ಮಾಡಿದ್ದರು,(ಏಜೆನ್ಸೀಸ್).