ನ್ಯೂಸ್

'ಬೇಬಿ' ಚಿತ್ರದಲ್ಲಿ ಮಿಂಚಿದ ನಟಿ ವೈಷ್ಣವಿ ಚೈತನ್ಯ; ಮೂರನೇ ವಾರಕ್ಕೆ ಸಿನಿಮಾ ಗಳಿಸಿದ್ದೆಷ್ಟು?

ಆಂಧ್ರಪ್ರದೇಶ: ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ, ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಬೇಬಿ' ಸಿನಿಮಾ ಬಿಡುಗಡೆಗೊಂಡ ಮೊದಲ ದಿನದಿಂದಲೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರ ಸಿನಿಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸದ್ಯ ಚಿತ್ರದ ಒಟ್ಟು ಕಲೆಕ್ಷನ್​ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 'ಬೇಬಿ' ಗಳಿಕೆಯ ವರದಿ ಹೀಗಿದೆ:

ಮೊದಲನೇ ವಾರ: 42.25 ಕೋಟಿ ರೂ.

2ನೇ ವಾರ: 26.75 ಕೋಟಿ ರೂ.

3ನೇ ವಾರದಲ್ಲಿ ಶುಕ್ರವಾರ: 1 ಕೋಟಿ ರೂ.

ಶನಿವಾರ: 1.75 ಕೋಟಿ ರೂ.

ಭಾನುವಾರ: 2.25 ಕೋಟಿ ರೂ.

ಸೋಮವಾರ: 1 ಕೋಟಿ ರೂ.

ಮಂಗಳವಾರ: 1 ಕೋಟಿ ರೂ.

ಇಲ್ಲಿಯವರೆಗೂ ಬಾಕ್ಸ್​ ಆಫೀಸ್​​ನಲ್ಲಿ ಬೇಬಿ ಚಿತ್ರವು ಭಾರತದಲ್ಲಿ ಒಟ್ಟು 76 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಈ ಚಿತ್ರ ಇದೀಗ ಟಾಪ್​ ನಟರ ಸಿನಿಮಾಗಳನ್ನು ಹಿಂದಿಕ್ಕಿ ಪ್ರದರ್ಶನ ಮತ್ತು ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ,(ಏಜೆನ್ಸೀಸ್).