Baby Actress: ಕಳೆದ ವರ್ಷ ಜುಲೈ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ ‘ಬೇಬಿ’, ಆಹಾ ಎಂಬ ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲೂ ರಿಲೀಸ್ ಆಗಿ ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕಡಿಮೆ ಬಜೆಟ್ನಲ್ಲಿ ಅತ್ಯುತ್ತಮ ಚಿತ್ರ ಕೊಟ್ಟ ನಿರ್ದೇಶಕ ಸಾಯಿ ರಾಜೇಶ್, ಅಲ್ಪಾವಧಿಯಲ್ಲೇ ಚಿತ್ರದ ಭರ್ಜರಿ ಯಶಸ್ಸನ್ನು ಕಣ್ತುಂಬಿಕೊಂಡರು. ಇದೊಂದು ಸೂಪರ್ಹಿಟ್ನಿಂದ ಸಿನಿಮಾದ ಹಲವು ಕಲಾವಿದರ ಅದೃಷ್ಟವೇ ಬದಲಾಯಿತು. ಈ ಸಾಲಿಗೆ 'ಬೇಬಿ' ನಟಿ ಮೊದಲಿಗರು.
ಇದನ್ನೂ ಓದಿ: ಒಂದು ಸಣ್ಣ ಕಾರಣಕ್ಕೆ ಪರೀಕ್ಷೆಗೆ ಕೂರಿಸಲಿಲ್ಲ! ಎಲ್ಲರೆದುರು ಅವಮಾನ; ಮನನೊಂದ ವಿದ್ಯಾರ್ಥಿನಿ ಸಾವಿಗೆ ಶರಣು | Student
ಬೇಬಿ ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ಚೈತನ್ಯ, ಪ್ರಸ್ತುತ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್, ಬೇಡಿಕೆಯಲ್ಲಿರುವ ನಟಿಯರ ಸಾಲಿನಲ್ಲಿದ್ದಾರೆ. ಸ್ಟಾರ್ ನಟರ ಬಹುನಿರೀಕ್ಷಿತ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ವೈಷ್ಣವಿ, ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆ ಜತೆಗೆ ದುಬಾರಿ ಮೊತ್ತದ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ. ತೆಲುಗು ಚಿತ್ರರಂಗದ ನಿರ್ದೇಶಕರು ಮತ್ತು ನಿರ್ಮಾಪಕರು ವೈಷ್ಣವಿಯತ್ತ ವಾಲುತ್ತಿರುವುದು ಗಮನಾರ್ಹ.
ಇತ್ತೀಚಿನ ಸಿನಿ ವರದಿ ಪ್ರಕಾರ, ನಿರ್ಮಾಪಕರೊಬ್ಬರು ತಮ್ಮ ಹೊಸ ಪ್ರಾಜೆಕ್ಟ್ಗಾಗಿ ವೈಷ್ಣವಿ ಚೈತನ್ಯಗೆ ಬರೋಬ್ಬರಿ ಒಂದು ಕೋಟಿ ರೂ. ಸಂಭಾವನೆಯನ್ನು ನೀಡಿದ್ದಾರೆ. ಯುವಜನತೆ ಮತ್ತು ಫ್ಯಾಮಿಲಿ ಪ್ರೇಕ್ಷಕ ವರ್ಗವನ್ನು ತನ್ನತ್ತ ಸೆಳೆದಿರುವ ವೈಷ್ಣವಿ ಕ್ರೇಜ್ ಗಮನದಲ್ಲಿಟ್ಟುಕೊಂಡು ಈ ಮೊತ್ತವನ್ನು ಕೊಡಲು ನಿರ್ಮಾಪಕರು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಒಂದೇ ಒಂದು ಬೇಬಿ ಚಿತ್ರದ ಯಶಸ್ಸಿನಿಂದ ನಟಿಯ ಅದೃಷ್ಟವೇ ಬದಲಾಗಿದ್ದು, ಒಳ್ಳೊಳ್ಳೆ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳ ಆಗರವು ಹೆಚ್ಚಾಗಿದೆ.
ವೃತ್ತಿಜೀವನದ ಆರಂಭದಲ್ಲಿ 'ಲವ್ ಇನ್ 143 ಅವರ್ಸ್', 'ದಿ ಸಾಫ್ಟ್‌ವೇರ್ ಡೆವಲಪರ್', 'ಅರೆರೆ ಮಾನಸ', 'ಮಿಸ್ಸಮ್ಮಾ' ಮುಂತಾದ ಕಿರುಚಿತ್ರಗಳ ಮೂಲಕ ಉತ್ತಮ ನಟಿಯಾಗಿ ಗುರುತಿಸಿಕೊಂಡ ವೈಷ್ಣವಿ, ಅಲ್ಲು ಅರ್ಜುನ್ ಅವರ 'ಅಲಾ ವೈಕುಂಠಪುರಮುಲೋ' ಮತ್ತು 'ವರುಡು ಕವಲೇನು' ನಂತಹ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದ ವೈಷ್ಣವಿ ಆನಂತರ 'ಬೇಬಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು,(ಏಜೆನ್ಸೀಸ್).