ನವದೆಹಲಿ: ತಾನು ಜೀವಿಸಿದ್ದ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ-ಕಲ್ಲೋಲ, ಭೂಕಂಪ, ಪ್ರವಾಹ, ಖ್ಯಾತ ನಾಮಧೇಯರ ಬದುಕಿನಲ್ಲಿ ಬಿರುಗಾಳಿ ಹೀಗೆ ಹತ್ತು ಹಲವು ಮಹಾನ್ ಭವಿಷ್ಯವನ್ನು ಕೇವಲ ಬಾಯಲ್ಲಿ ಹೇಳುವುದಲ್ಲದೇ, ಅದನ್ನು ದಾಖಲೆಯಾಗಿ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ (Baba Vanga) ಅವರ ಸ್ಪೋಟಕ ಭವಿಷ್ಯಗಳು ಇಂದು ನಿಜವಾಗಿರುವುದು ನಿಜಕ್ಕೂ ಅಚ್ಚರಿಯೇ. ಏಲಿಯನ್ಗಳು ಮನುಷ್ಯರನ್ನು ಸಂಪರ್ಕಿಸುವ ಕಾಲವು ಸನ್ನಿಹಿತ ಎಂದು ಹೇಳಿರುವ ವಾಂಗಾ, ಕೆಲವೊಂದು ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಇದು ಹೀಗೆಯೇ ಆಗುತ್ತದೆ ಎಂದು ನಿಖರ ಮುನ್ಸೂಚನೆ ನೀಡಿದ್ದಾರೆ. ಸದ್ಯ ಈ ಪೈಕಿ ಅವರ ಒಂದು ನುಡಿ ಇದೀಗ ಭಾರೀ ಸದ್ದು ಮಾಡುತ್ತಿದ್ದು, 2025ರಲ್ಲಿ ಸಂಭವಿಸುವ ಯುದ್ಧದ ಬಗ್ಗೆ ಒತ್ತಿ ಹೇಳಿದೆ.
ಇದನ್ನೂ ಓದಿ: ಲುಡೋ ಗೇಮ್ ಆಡಿ 50 ಸಾವಿರ ರೂ. ಕಳ್ಕೊಂಡ ಮಹಿಳೆ! ಅದೇ ನೋವಲ್ಲಿ ಪತಿಗೆ ಕರೆ ಮಾಡಿ ಸಾವಿಗೆ ಶರಣು | Ludo game
1996ರಲ್ಲಿ ಮೃತಪಟ್ಟ ಬಲ್ಗೇರಿಯನ್ ಬಾಬಾ ವಂಗಾ, ಅಂದಿನ ಕಾಲಘಟ್ಟಕ್ಕೆ ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಹೀಗೆ ಕರೆಯಲು ಕಾರಣ ಆಕೆ ನುಡಿದಿದ್ದ 9/11 ಭಯೋತ್ಪಾದಕ ದಾಳಿ, ರಾಜಕುಮಾರಿ ಡಯಾನಾ ಸಾವು, ಚೋರ್ನೋಬಿಲ್ ದುರಂತ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ವಿಶ್ವ ಘಟನೆಗಳ ಭವಿಷ್ಯವಾಣಿಗಳು. ಬಾಬಾ ವಂಗಾಗಿಂತಲೂ ಮೊದಲು ಪ್ರಾಚೀನ ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರೆಡೇಮ್, ಸಾಮಾನ್ಯವಾಗಿ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುತ್ತಿದ್ದ ವ್ಯಕ್ತಿ, ತಮ್ಮ ನಿಖರವಾದ ಭವಿಷ್ಯವಾಣಿಗಳಿಂದಲೇ ವಿಶ್ವದಾದ್ಯಂತ ಹೆಚ್ಚು ಪ್ರಸಿದ್ಧರಾದವರು. ಅಂದಿನ ಕಾಲದಲ್ಲಿ ಇವರು ನುಡಿದ ಭವಿಷ್ಯಗಳು ಎಷ್ಟು ಕಾಡುತ್ತಿತ್ತೋ ಅದೇ ರೀತಿ ಬಾಂಬಾ ವಂಗಾ ನುಡಿದ ಭವಿಷ್ಯಗಳು ಅಷ್ಟೇ ಅಚ್ಚರಿ ಮೂಡಿಸುತ್ತಿತ್ತು.
2025ರಲ್ಲಿ ಯುರೋಪಿನಲ್ಲಿ ಯುದ್ಧ ಮೂಲಕ ದುರಂತ ಸಂಭವಿಸುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ದೊಡ್ಡ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯ ನಷ್ಟವನ್ನು ವಂಗಾ ಊಹಿಸಿದ್ದರು. ಉಕ್ರೇನ್‌ನ ನಡೆಯುತ್ತಿರುವ ರಷ್ಯಾದ ಆಕ್ರಮಣದಿಂದ ಪ್ರತ್ಯೇಕವಾಗಿ ಎರಡು ರಾಷ್ಟ್ರಗಳ ನಡುವೆ ಹೊಸ ಸಂಘರ್ಷ ಉಂಟಾಗುತ್ತದೆ ಎಂಬುದು ಆಕೆಯ ಭವಿಷ್ಯವಾಣಿಯಲ್ಲಿ ಉಲ್ಲೇಖವಾಗಿದೆ.
ಅದೇ ರೀತಿ ನಾಸ್ಟ್ರಾಡಾಮಸ್ ಕೂಡ ಯುರೋಪ್‌ಗೆ ಭೀಕರ ಪರಿಸ್ಥಿತಿ ಎದುರಾಗಲಿದೆ ಎಂದು ಕಟು ಭವಿಷ್ಯ ನುಡಿದಿದ್ದರು. ಅವರ ಶತಮಾನಗಳ ಹಳೆಯ ಭವಿಷ್ಯವಾಣಿಗಳು ಖಂಡವನ್ನು ಆವರಿಸುವ ಕ್ರೂರ ಯುದ್ಧಗಳು ನಡೆಯಲಿವೆ ಎಂದಿದ್ದರು. ಇವರಿಬ್ಬರು ನೀಡಿರುವ ಮುನ್ಸೂಚನೆ ಬಹುತೇಕ ಒಂದೇ ವಿಷಯವಾಗಿದ್ದು, ಅದು ಯುರೋಪಿನ ಘೋರ ಯುದ್ಧ.
ಬಾಬಾ ವಂಗಾ ನುಡಿದ ಭವಿಷ್ಯವಾಣಿ ಒಂದೆಡೆಯಾದರೆ, ಮತ್ತೊಂದೆಡೆ ಪ್ರಾಚೀನ ಕಾಲದ ನಾಸ್ಟ್ರಾಡಾಮಸ್ ನುಡಿದಿರುವ ಭವಿಷ್ಯಗಳು, ವ್ಯಾಖ್ಯಾನಗಳು ಸದ್ಯ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಗಿದೆ. ಈ ಭವಿಷ್ಯವಾಣಿಗಳು ನೋಡಗರನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).