ಬೆಂಗಳೂರು: ಆಸೆ ದುಃಖಕ್ಕೆ ಮೂಲವೆಂದು ದಾರ್ಶನಿಕರು ಹೇಳಿದರು. ಇದರ ಜೊತೆಗೆ ಇಂದಿನ ಆಧುನಿಕ ಯುಗದಲ್ಲಿ ಕೆಲವು ಅಭ್ಯಾಸಗಳು(Attitude) ಮತ್ತು ವರ್ತನೆ ಸಹ ದುಃಖ ಮತ್ತು ನಿರಾಸೆಗೆ ಕಾರಣವಾಗುತ್ತವೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಪಾಕ್ಗೆ ಝಾಕಿರ್ ನಾಯ್ಕ್.. ದ್ವೇಷ ಭಾಷಣಕಾರ ಬಂದಿದ್ದೇಕೆ? ಅಜೆಂಡಾ ಏನು? ಇಲ್ಲಿದೆ ಮಾಹಿತಿ..| Zakir Naik
ನೀವು ಆಗಾಗ್ಗೆ ದುಃಖಿತರಾಗಿದ್ದೀರಾ? ನಿಮ್ಮ ಜೀವನದಲ್ಲಿನ ದುಃಖಕ್ಕೆ ಇತರ ಜನರು ಅಥವಾ ಸಂದರ್ಭಗಳು ಕಾರಣವೆಂದು ನೀವು ಭಾವಿಸಬಹುದು. ಆದರೆ ಕೆಲವೊಮ್ಮೆ ಸಮಸ್ಯೆಗಳಿಗೆ ನಾವೇ ಕಾರಣರಾಗಿರುತ್ತೇವೆ ಎಂಬುದು ನಿಮಗೆ ತಿಳಿದಿದೆಯೇ? ನಮ್ಮ ಕೆಲವು ಕೆಟ್ಟ ಅಭ್ಯಾಸ(Attitude) ಮತ್ತು ವರ್ತನೆ ನಮ್ಮನ್ನು ದುಃಖ ಮತ್ತು ನಿರಾಸೆ ಮಡುವಿಗೆ ದೂಡುತ್ತವೆ ಎಂದರೆ ಕಂಡಿತಾ ನಂಬಲೇ ಬೇಕು.
ನಕಾರಾತ್ಮಕ ಆಲೋಚನೆಗಳನ್ನು ಬದಲಾಯಿಸಿದಾಗ ಸಂತೋಷವಾಗಿರುತ್ತೇವೆ. ಆಗ ನಾವಷ್ಟೇ ಅಲ್ಲ, ನಮ್ಮ ಸುತ್ತಲಿನ ಜನರು ಸಹ ಧನಾತ್ಮಕತೆಯನ್ನು ಪಡೆಯುತ್ತಾರೆ. ಇದರಿಂದ ನಮ್ಮ ಕೆಲಸವೂ ಸುಧಾರಿಸುತ್ತದೆ. ಜೀವನದಲ್ಲಿ ಯಶಸ್ಸಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ.
ಇನ್ನು ನಮ್ಮ ಸಂತೋಷಕ್ಕೆ ಅಡ್ಡಿಯಾಗಿರುವ, ನಮ್ಮ ಮನಸ್ಸನ್ನು ಬಾಧಿಸುವ ಅಂತಹ ಅಭ್ಯಾಸಗಳನ್ನು ಸಕಾಲದಲ್ಲಿ ಬದಲಾಯಿಸುವ ಮೂಲಕ, ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು.
ಸಾಮಾನ್ಯವಾಗಿ ಮನೆ, ಕಚೇರಿ ಅಷ್ಟೇ ಜೀವನ ಎಂದುಕೊಂಡಿರುವ ಮಂದಿಯಲ್ಲಿ ಹೊರ ಜಗತ್ತಿಗೆ ತೆರೆದುಕೊಳ್ಳದೆ ನೆಮ್ಮದಿ ಹಾಳು ಮಾಡಿಕೊಂಡಿರುತ್ತಾರೆ. ಅವರ ಬಿಡುವಿಲ್ಲದ ಬದುಕು, ಜೀವನ ಶೈಲಿ ಸಂತೋಷವನ್ನು ಕಸಿದುಕೊಂಡಿರುತ್ತದೆ.
ಹೌದು, ದೈಹಿಕ ಚಟುವಟಿಕೆಯ ಕೊರತೆಯು ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಯಮಿತ ವ್ಯಾಯಾಮವು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಖಿನ್ನತೆ, ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಯಾವುದೇ ವ್ಯಕ್ತಿ ದೈಹಿಕವಾಗಿ ಕ್ರಿಯಾಶೀಲರಾಗಿರುವಾಗ, ಎಂಡಾರ್ಫಿನ್ ಎಂಬ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಅದು ಸಂತೋಷ ತಂದು ಮತ್ತು ಒತ್ತಡ ಮುಕ್ತವಾಗಲು ಸಹಕರಿಸುತ್ತದೆ. ಆದ್ದರಿಂದ, ನೀವು ಸಂತೋಷವಾಗಿರಲು ಬಯಸಿದರೆ ನಿಯಮಿತ ವ್ಯಾಯಾಮ ಅಥವಾ ಕೆಲವು ದೈಹಿಕ ಚಟುವಟಿಕೆ ಬಹಳ ಮುಖ್ಯ.
ಅದೇ ರೀತಿ, ನಿಯಮಿತ ರೀತಿ ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳನ್ನು ತೆಗೆದುಕೊಳ್ಳದಿದ್ದರೆ, ಖಿನ್ನತೆ, ಆತಂಕ ಮತ್ತು ಗಮನ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ, ಆಹಾರದಲ್ಲಿ ಮೀನು, ವಾಲ್‌ನಟ್ಸ್ ಮತ್ತು ಚಿಯಾ ಬೀಜಗಳಂತಹ ಒಮೆಗಾ 3 ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇರಿಸುವುದು ಬಹಳ ಮುಖ್ಯ.
ಇನ್ನು ಇಡೀ ದಿನ ಕಚೇರಿ, ಮನೆಯಲ್ಲೇ ಕಾಲದೂಡುವವರು ಸೂರ್ಯನ ಶಾಖದಿಂದ ಸಿಗುವ ವಿಟಮಿನ್ ಡಿ ಕೊರತೆ ಎದುರಿಸುತ್ತಾರೆ. ಇದರಿಂದಾಗಿಯೂ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ, ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಬೇಕು.
ಸಾಕಷ್ಟು ನಿದ್ದೆ ಮಾಡದಿರುವುದು ಸಹ ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ರಾತ್ರಿಯಲ್ಲಿ ಕನಿಷ್ಠ 7-9 ಗಂಟೆ ನಿದ್ದೆ ಮಾಡುವುದು ಬಹಳ ಮುಖ್ಯ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ ಮತ್ತು ಕೆಫೀನ್‌ನಿಂದ ದೂರವಿರಬೇಕು. ಇವುಗಳ ಜೊತೆಗೆ ಸರಿಯಾದ್ದನ್ನು ಓದುವುದು, ನೋಡುವುದು, ಕೇಳುವುದು, ಎಲ್ಲವೂ ವ್ಯಕ್ತಿತ್ವ ಮತ್ತು ಆಲೋಚನೆಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ.
ಅಷ್ಟೇ ಅಲ್ಲ, ನಕಾರಾತ್ಮಕ ಜನರು ಮತ್ತು ಆಲೋಚನೆಗಳಿಂದ ದೂರವಿದ್ದು, ಸಕಾರಾತ್ಮಕ ಜನರೊಂದಿಗೆ ಬೆರೆತು, ಒಳ್ಳೆಯ ಪುಸ್ತಕಗಳನ್ನು ಓದಿ ಮತ್ತು ಉತ್ತಮ ಸಂಗೀತವನ್ನು ಕೇಳಬೇಕು. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದ ದಿಕ್ಕು ಮತ್ತು ಸ್ಥಿತಿ ಎರಡೂ ಗಮನಾರ್ಹವಾಗಿ ಸುಧಾರಿಸುತ್ತದೆ. ಸಂತಸಕರ ಜೀವನ ನಿಮ್ಮದಾಗುತ್ತದೆ.