ನವದೆಹಲಿ: ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಜನರು ಮನೆಯಿಂದ ಹೊರಗೆ ಬರುವುದು ವಿರಳವಾಗಿತ್ತು. ಇಡೀ ವಾತಾವರಣವನ್ನು ಗಮನಿಸಿದರೆ, ದೇಶದಲ್ಲಿ ಇಂದು ಮತ್ತೆ ಲಾಕ್ಡೌನ್ ಘೋಷಣೆಯಾದಂತೆ ಭಾಸವಾಗುತ್ತಿತ್ತು.
ರಾಜ್ಯದಲ್ಲಿ ಮಧ್ಯಾಹ್ನ 1.32ರ ವೇಳೆಗೆ ಸೂರ್ಯ ಗ್ರಹಣ ಮೋಕ್ಷವಾಗಿದೆ. ಜನರು ಮನೆಗಳಲ್ಲಿ ಪೂಜೆ ನೆರವೇರಿಸಿದ್ದಲ್ಲದೇ, ನಂತರ ದೇವಾಲಯಗಳಿಗೆ ಭೇಟಿ ನೀಡಿದರು.
ಮುಂದಿನ ಗ್ರಹಣಗಳು ಯಾವಾಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
* ಜುಲೈ 4-5 ರಂದು ಖಂಡಗ್ರಾಸ ಚಂದ್ರಗ್ರಹಣ
* ನವೆಂಬರ್ 29-30- ಖಂಡಗ್ರಾಸ ಚಂದ್ರ ಗ್ರಹಣ
* ಡಿಸೆಂಬರ್ 14- ಖಗ್ರಾಸ ಸೂರ್ಯ ಗ್ರಹಣ
2021ರಲ್ಲಿ ಸಂಭವಿಸಲಿರುವ ಗ್ರಹಣಗಳ ಮಾಹಿತಿ
* ಮೇ 26- ಚಂದ್ರ ಗ್ರಹಣ
* ಜೂನ್ 10- ಸೂರ್ಯ ಗ್ರಹಣ
* ನವೆಂಬರ್ 18-19- ಪಾರ್ಶ್ವ ಚಂದ್ರ ಗ್ರಹಣ
* ಡಿಸೆಂಬರ್ 4 - ಖಗ್ರಾಸ ಸೂರ್ಯ ಗ್ರಹಣ
ಇದನ್ನೂ ಓದಿ; ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..
ಈ ಗ್ರಹಣಗಳಲ್ಲಿ ಬಹುತೇಕವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಮುಂದಿನ ನವೆಂಬರ್ 29-30 ರಂದು ಸಂಭವಿಸಲಿರುವ ಖಂಡಗ್ರಾಸ ಚಂದ್ರಗ್ರಹಣವು ಏಷ್ಯಾದ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.