#ArrestKanganaRanaut ಹೀಗೊಂದು ಹ್ಯಾಷ್ಟ್ಯಾಗ್ ಅಭಿಯಾನ ಇವತ್ತು ದಿನವಿಡಿ ಟ್ರೆಂಡಿಂಗ್ನಲ್ಲಿದೆ. ಈ ಮೂಲಕ ಕಂಗನಾ ಬಂಧನಕ್ಕೆ ಸಾಕಷ್ಟು ಮಂದಿ ಬೇಡಿಕೆ ಇಟ್ಟಿದ್ದಾರೆ.
ಸುಶಾಂತ್ ಸಿಂಗ್ ಸಾವನ್ನಪ್ಪಿದ ಮೇಲೆ ಹೆಚ್ಚು ಸುದ್ದಿಯಲ್ಲಿರುವವರು ಕಂಗನಾ. ನಿತ್ಯ ಒಂದಲ್ಲ ಒಂದು ಕಿರಿಕ್ ಮಾಡಿಕೊಂಡು, ಅವರಿವರ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತ ಬಾಲಿವುಡ್ನ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಇದೆಲ್ಲವನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಅರೆಸ್ಟ್ ಕಂಗನಾ ರಣಾವತ್ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಇದೀಗ ಈ ಟ್ರೆಂಡ್ ಬಗ್ಗೆ ಸ್ವತಃ ಕಂಗನಾ ಟೀಮ್ ಪ್ರತಿಕ್ರಿಯೆ ನೀಡಿದೆ.
‘ಹಿಂದಿನಿಂದ ಕಂಗನಾ ಮೇಲೆ ಹಲ್ಲೆ ನಡೆಸಿ ಅವಳ ವಿರುದ್ಧ ಪಿತೂರಿ ನಡೆಸುವ ಬದಲು ಎದುರಿಗೆ ಬಂದು ನಿಂತು ಆಕೆ ಮಾಡಿದ ಒಂದೇ ಒಂದು ತಪ್ಪನ್ನು ಸಾಕ್ಷಿ ಸಮೇತ ಹಾಜರುಪಡಿಸಿ. ಅಥವಾ ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಿ, ಆಗಲಾದರೂ ಸತ್ಯ ಹೊರಬರಲಿದೆ. ಒಂದು ವೇಳೆ ಕಂಗನಾ ಗೆದ್ದರೆ, ಹಾಲು ಕುಡಿಯೊ ಚಿಂಗು ಮಿಂಗು ಗ್ಯಾಂಗ್ಗೆ ಶಿಕ್ಷೆಯಾಗಲಿ. ಕಂಗನಾ ತಪ್ಪಿದ್ರೆ, ಆಕೆ ಶಾಶ್ವತವಾಗಿ ಇಡೀ ಇಂಡಸ್ಟ್ರಿಯನ್ನೇ ಕೈ ಬಿಡಲು ಸಿದ್ದ. ನೀವು ತಯಾರಿದ್ದೀರಾ’ ಎಂದು ಕಂಗನಾ ಟೀಮ್ ಪ್ರತ್ಯುತ್ತರ ನೀಡಿದೆ.