ನ್ಯೂಸ್

ಇನ್ಸ್​​ಟಾಗ್ರಾಂನಲ್ಲಿ ಯುವತಿಯರ ನಗ್ನ ಫೋಟೋ ಪಡೆದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಟೆಕ್ಕಿಯ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅತಿಯಾದ ಜಾಗರೂಕತೆ ಅಗತ್ಯ. ಬಳಕೆಯಲ್ಲಿ ಸ್ವಲ್ಪ ಮೈಮರೆತರೂ ಜೀವಕ್ಕೇ ಕುತ್ತು ತರುವಂತಹ ಘಟನೆಗಳು ಸಂಭವಿಸಿಬಹುದು. ಜತೆಗೆ ಅಮಾಕರು, ಹುಡುಗಿಯರನ್ನು ಸಾಮಾಜಿಕ ಜಾಲತಾಣದ ಮೂಲಕ ನಂಬಿಸಿ ವಂಚನೆ ಮಾಡುವಂತಹ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಲೇ ಇವೆ.

ಇಲ್ಲೊಬ್ಬ ಟೆಕ್ಕಿ ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ನಂಬಿಸಿ ಅತ್ಯಾಚಾರ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಅಗ್ನೇಯ ವಿಭಾಗದ ಸೈಬರ್ ಕ್ರೈ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿಲ್ಲಿ ಪ್ರಸಾದ್ (26) ಬಂಧಿತ ಆರೋಪಿ. ಈತ 2018 ರಿಂದ ಬೆಂಗಳೂರಿನಲ್ಲಿ ವಾಸವಿದ್ದ.

ನಗರದಲ್ಲಿ ಟೆಕ್ಕಿಯಾಗಿದ್ದ ಆರೋಪಿ ಮೋನಿಕಾ‌ ಹಾಗೂ ಮ್ಯಾನೇಜರ್ ಎಂಬ ಹೆಸರಿನಲ್ಲಿ ಎರಡು ನಕಲಿ ಇನ್ಸ್​​ಟಾಗ್ರಾಂ ಖಾತೆ ತೆರದಿದ್ದ. ಇದರಲ್ಲಿ ಯುವತಿಯರನ್ನು ಸಂಪರ್ಕಿಸಿ, ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈತನ ಮಾತಿಗೆ ಮರುಳಾದ ಮಹಿಳೆಯರು ಕೆಲಸದ ಆಸೆಯಿಂದ ಹೇಳಿದಂತೆ ಕೇಳುತ್ತಿದ್ದರು. ನಂತರ ಯುವತಿಯರಲ್ಲಿ ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳನ್ನು ಪಡೆದುಕೊಳ್ಳುತಿದ್ದ. ಬಳಿಕ ಆ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜತೆಗೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಸುತ್ತಿದ್ದ.

ಇದರಂತೆ ಓರ್ವ ಯುವತಿಯನ್ನು ಬೆದರಿಸಿ ಮಡಿವಾಳದ ಓಯೋ ರೂಂನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೇಳಿದ್ದ. ಈ ವೇಳೆ ಆಕೆಗೆ ಗೊತ್ತಾಗದಂತೆ ವೀಡಿಯೋ ಮಾಡಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ ವೀಡಿಯೋ ಬಳಸಿಕೊಂಡು ಯುವತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ತಾನು ಕೇಳಿದಷ್ಟು ಹಣ ಕೊಡಲೇ ಹೋದಲ್ಲಿ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ. ಇದೀಗ ಆರೋಪಿಯ ಬಂಧನದ ಬಳಿಕ ಹಲವು ಯುವತಿಯರಿಗೆ ಇದೆ ರೀತಿ ವಂಚನೆ ಮಾಡಿರುವುದು ಗೊತ್ತಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.