ಆಂಧ್ರಪ್ರದೇಶ: ಟಾಲಿವುಡ್ ಚಿತ್ರರಂಗದ ನಟಿ ಅನುಷ್ಕಾ ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದ ಬಿಡುಗಡೆಯ ದಿನಾಂಕವನ್ನು ಇದೀಗ ಮುಂದೂಡಿದ್ದು, ಈ ಬಗ್ಗೆ ಸ್ವತಃ ಅನುಷ್ಕಾ ಅವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Fresh Allegation On Nisha Narasappa: ಮಾಸ್ಟರ್ ಆನಂದ್ ಪುತ್ರಿ ಹೆಸರಲ್ಲಿ ವಂಚಿಸಿದ್ದ ನಿಶಾ ನರಸಪ್ಪ ವಿರುದ್ಧ ಹೊಸ ಆರೋಪ!
ಕೆಲವು ವರ್ಷಗಳ ನಂತರ ಇದೀಗ ಮತ್ತೊಮ್ಮೆ ತಮ್ಮ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರನ್ನು ಕಾಮಿಡಿ-ರೋಮ್ಯಾಂಟಿಕ್ ಜಾನರ್ ಚಿತ್ರದ ಮುಖೇನ ಮನರಂಜಿಸಲು ಅನುಷ್ಕಾ ಶೆಟ್ಟಿ ಸಜ್ಜಾಗಿದ್ದಾರೆ. ಈ ಸಂಗತಿ ಅವರ ಫ್ಯಾನ್ಸ್ಗೆ ಬಹಳ ಸಂತಸ ನೀಡಿದ್ದು, ಬಿಡುಗಡೆ ದಿನಾಂಕದ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಆದ್ರೆ, ಚಿತ್ರತಂಡ ಪ್ರಕಟಿಸಿದ ಮಾಹಿತಿ ಪ್ರಕಾರ, ಇದೀಗ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಆಗಸ್ಟ್ 4, 2023 ರಂದು ರಿಲೀಸ್ ಆಗಲು ಈ ಹಿಂದೆಯೇ ನಿಗದಿಪಡಿಸಲಾಗಿದ್ದ ದಿನಾಂಕವನ್ನು ಇದೀಗ ಆಗಸ್ಟ್ 18, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಮುಗಿಯದ ಕಾರಣ ರಿಲೀಸ್ ಡೇಟ್ ಅನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ಅನುಷ್ಕಾ ಶೆಟ್ಟಿ ಕೂಡ ಇದೇ ಮಾಹಿತಿಯನ್ನು ತಿಳಿಸಿದ್ದು, 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯದ ಕಾರಣ, ಬಿಡುಗಡೆ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಶೀಘ್ರವೇ ಅಧಿಕೃತ ಡೇಟ್ ಘೋಷಣೆ ಮಾಡಲಿದ್ದೇವೆ, ನಿರೀಕ್ಷಿಸಿ ಎಂದು ಪೋಸ್ಟ್ ಹಾಕಿದ್ದಾರೆ.
ಯುವಿ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಮುರಳಿ ಶರ್ಮಾ, ಜಯಸುಧಾ, ತುಳಸಿ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).