ನ್ಯೂಸ್

'ಅನಿಮಲ್​' ಸಿನಿಮಾ ಪ್ರೇರಣೆ! ಕಲ್ಯಾಣ ಮಂಟಪಕ್ಕೆ ಮಷಿನ್​ಗನ್ ಮೇಲೆ ಎಂಟ್ರಿ ಕೊಟ್ಟ ನವ ಜೋಡಿ​; Video ವೈರಲ್​

ನವದೆಹಲಿ: ಬಾಲಿವುಡ್​ನ ರಣಬೀರ್​ ಕಪೂರ್​ ನಟನೆಯ 'ಅನಿಮಲ್​' ಚಿತ್ರದ ಪ್ರೇರಣೆ ಪಡೆದ ಹಸೆಮಣೆ ಏರುತ್ತಿರುವ ನವ ಜೋಡಿಯೊಂದು ಬೃಹತ್​ ಮಷೀನ್​ಗನ್​ ಮೇಲೆ ಕಲ್ಯಾಣ ಮಂಟಪಕ್ಕೆ ಬರುತ್ತಿರುವ ವಿಡಿಯೊಂದು( Video) ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮದುವೆಯ ಸಂಸ್ಕೃತಿಯು ಪ್ರತಿದಿನವೂ ಹೆಚ್ಚು ನವ್ಯವಾಗಿ ಹೊರಹೊಮ್ಮುತ್ತಿವೆ. ಅದರಲ್ಲೂ ದಂಪತಿಗಳು ತಮ್ಮ ವಿಶೇಷ ದಿನವನ್ನು ಮರೆಯಲಾಗದಂತೆ ನೋಡಿಕೊಳ್ಳಲು ನವೀನ ಆಲೋಚನೆಗಳೊಂದಿಗೆ ಹೊರ ಬರುತ್ತಿದ್ದಾರೆ. ಅದರಂತೆ ಅನಿಮಲ್​ ಸಿನಿಮಾ ಪ್ರೇರಣೆ ಪಡೆದ ನವ ಜೋಡಿ ಮಷಿನ್​ಗನ್(ವಾಹನ) ಮೇಲೆ ಎಂಟ್ರಿ ಕೊಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮಿನಿ ಕಾರುಗಳು ಶೆಫ್​ನಲ್ಲಿ ಮಾಡಲಾಗಿರುವ ಈ ಮಷಿನ್​ಗನ್​ ಅಂದಾಜು 500 ಕೆ.ಜಿ ತೂಕವಿದೆ. ಇದರ ಮೇಲೆ ನವಜೋಡಿ ಕಲ್ಯಾಣ ಮಂಟಪಕ್ಕೆ ಬಂದು ಇಳಿದಿದ್ದಾರೆ. ಅಲ್ಲದೆ, ಜೋಡಿ ಬರುವ ಸಂದಂರ್ಭದಲ್ಲಿ ಗನ್​ನ ಎರಡು ಬದಿಯಲ್ಲಿ ಬೃಹತ್​ ಹೊಗೆಯನ್ನು ಬಿಡುತ್ತಿದೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಮೂರು ಕೋಟಿಗೂ ಅಧಿಕ ವಿಕ್ಷಣೆಗಳನ್ನು ಪಡೆದಿದೆ.

ಈ ಕ್ಲೀಪ್​ ಇದೀಗ ಭಾರಿ ಸದ್ದು ಮಾಡುತ್ತಿದ್ದು ನೆಟ್ಟಿಜನ್ಸ್​ ತರೆಹವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ,(ಏಜೆನ್ಸೀಸ್​).