ರೀಲ್ಸ್​​ಗಾಗಿ ನಾಯಿ ಹಾಲು ಕುಡಿದ ಹುಡುಗಿ; Viral Video ನೋಡಿ ನೆಟ್ಟಿಗರು ಕಿಡಿ

Untitled design - 2024-12-16T174259.807
Published on

ಲೆಕ್ಕವಿಲ್ಲದಷ್ಟು ಸೆಲ್ಫಿ ತೆಗೆಯುವುದು, ರೀಲ್ಸ್​​ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ರೀಲ್ಸ್​ ಮಾಡಲು ಜನರು ತಮ್ಮ ಆತ್ಮಸಾಕ್ಷಿಗೆ ಬೀಗ ಹಾಕಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video)​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ನಾಯಿ ಮಲಗಿರುವುದನ್ನು ನೋಡಬಹುದು. ರೀಲ್ಸ್​​​ ಮಾಡುವ ಹುಚ್ಚಾಟದಿಂದ ನಾಯಿ ಮಲಗಿರುವ ಸಮಯದಲ್ಲಿ ಹುಡುಗಿಯೊಬ್ಬಳು ನಾಯಿ ಹಾಲು ಕುಡಿಯುತ್ತಿರುವುದನ್ನು ಕಾಣಬಹುದು. ಲೈಕ್​ ಮತ್ತು ಕಾಮೆಂಟ್​ ಪಡೆಯಲುಜ ಜನರು ಯಾವ ಮಟ್ಟಕ್ಕೆಲ್ಲಾ ಹೋಗುತ್ತಾರೆ ಎಂಬುದಕ್ಕೆ ಇದೇ ನಿದರ್ಶನ.

ಈ ವಿಡಿಯೋ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ ಈ ವಿಡಿಯೋವನ್ನು 7 ಲಕ್ಷ 63 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವಳು ಇಂದಿನ ಮಹಿಳೆ ಏನು ಬೇಕಾದರೂ ಮಾಡಬಹುದು, ಆಕೆ ದೇಶದ ಪ್ರಸಿದ್ಧ ರೀಲ್ ಅನ್ನು ಮಾಡುವ ಮೂಲಕ ಪ್ರಸಿದ್ಧಳಾಗುವ ಹುಚ್ಚಳಾಗಿದ್ದಾಳೆ, ಓ ಕರ್ತನೇ.. ನೀನು ಇದನ್ನೆಲ್ಲಾ ಏಕೆ ನೋಡಬೇಕು?, ನಾಯಿ ಎಚ್ಚರವಾಗಿ ಕಚ್ಚಿದ್ದರೆ ಏನು ಮಾಡುತ್ತಿದ್ದಳು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net