ನ್ಯೂಸ್

ನಟಿ, ನಿರೂಪಕಿ, ಸಿಸ್ಟರ್​ ಕನುಪ್ರಿಯಾ ಕೋವಿಡ್​ಗೆ ಬಲಿ; 2 ದಿನ ಕೃತಕ ಉಸಿರಾಟದಲ್ಲಿ ಜೀವನ್ಮರಣ ಹೋರಾಟ

ನವದೆಹಲಿ: ನಿನ್ನೆಯಷ್ಟೇ ಇಬ್ಬರು ರಾಷ್ಟ್ರಮಟ್ಟದ ಪತ್ರಕರ್ತರನ್ನು ಕಳೆದುಕೊಂಡಿದ್ದ ಮಾಧ್ಯಮಜಗತ್ತಿಗೆ ಇಂದು ಮತ್ತೊಂದು ಸಾವಿನ ಸುದ್ದಿ ಬಂದೆರಗಿದೆ. ಖ್ಯಾತ ಟಿವಿ ನಿರೂಪಕಿ ಕನುಪ್ರಿಯಾ ಕೋವಿಡ್​-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ನಿನ್ನೆಯೇ ಕೊನೆಯಸಿರೆಳೆದಿದ್ದರೂ ಸಾವಿನ ಸುದ್ದಿ ಇಂದು ಹೊರಬಿದ್ದಿದೆ.

ಬ್ರಹ್ಮಕುಮಾರಿ ಬಿ.ಕೆ.ಶಿವಾನಿ ಅವರು ಟ್ವೀಟ್ ಮಾಡಿ ಈ ವಿಷಯವನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ದೂರದರ್ಶನದ ಮೂಲಕ ನಿರೂಪಕಿಯಾಗಿ ವೃತ್ತಿಜೀವನಕ್ಕೆ ಪ್ರವೇಶಿಸಿದ್ದ ಕನುಪ್ರಿಯಾ ಬಳಿಕ ಇತರ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದರು. ಬ್ರಹ್ಮಕುಮಾರಿ ಸಿಸ್ಟರ್ ಆಗಿದ್ದ ಇವರು 'ಅವೇಕನಿಂಗ್ ವಿದ್ ದ ಬ್ರಹ್ಮಕುಮಾರೀಸ್' ಎಂಬ ಶೋ ನಡೆಸಿಕೊಡುತ್ತಿದ್ದರು.

ನಿರೂಪಕಿ ಮಾತ್ರವಲ್ಲದೆ, ನಟಿ, ನಿರ್ಮಾಪಕಿ ಆಗಿಯೂ ಅವರು ಗುರುತಿಸಿಕೊಂಡಿದ್ದರು. 80 ಧಾರಾವಾಹಿ, 50 ಕಿರುಚಿತ್ರಗಳಲ್ಲಿ ಅಭಿನಯಿಸಿದ್ದ ಕನುಪ್ರಿಯಾ ಆ ಮೂಲಕವೂ ಕನುಪ್ರಿಯಾ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.