ರಾಜ್ಯದಲ್ಲಿ ಸತತ ಮೂರೂ ದಿನ 200ಕ್ಕೂ ಅಧಿಕ ಕೋವಿಡ್ ಸಾವು!; ಇವತ್ತು ಹೊಸದಾಗಿ ದೃಢಪಟ್ಟ ಸೋಂಕಿನ ಪ್ರಮಾಣ 40,990

Corona logo 3
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ತೀವ್ರಗತಿಯಲ್ಲಿ ಕಾಡುತ್ತಿದ್ದು, ಕಳೆದ ಮೂರು ದಿನಗಳಿಂದ ಪ್ರತಿದಿನ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೊನ್ನೆ 270 ಮಂದಿ, ನಿನ್ನೆ 217 ಹಾಗೂ ಇಂದು 271 ಮಂದಿ ಕರೊನಾಗೆ ಬಲಿಯಾಗಿದ್ದಾರೆ.

ಇಂದಿನ ವರದಿ ಪ್ರಕಾರ ಕರ್ನಾಟಕದಲ್ಲಿ ಹೊಸದಾಗಿ 40,990 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 15,64,132ಕ್ಕೆ ತಲುಪಿದೆ. ಸಮಾಧಾನದ ಸಂಗತಿ ಎಂದರೆ ಸೋಂಕಿತರ ಪೈಕಿ ಇವತ್ತೊಂದೇ ದಿನ 18,341 ಜನರು ಗುಣಮುಖರಾಗಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಇದುವರೆಗೆ ಒಟ್ಟು 11,43,250 ಮಂದಿ ಗುಣವಾಗಿ ಮನೆ ಸೇರಿಕೊಂಡಿದ್ದಾರೆ.

ಅದಾಗ್ಯೂ ರಾಜ್ಯದಲ್ಲಿ 4,05,068 ಸಕ್ರಿಯ ಪ್ರಕರಣಗಳಿದ್ದು, ಇವತ್ತೊಂದೇ ದಿನ 271 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 15,794ಕ್ಕೆ ತಲುಪಿದೆ. ರಾಜ್ಯದಲ್ಲಿ ಗುರುವಾರ 35,024, ಶುಕ್ರವಾರ 48,296 ಹೊಸ ಕೋವಿಡ್​-19 ಪ್ರಕರಣಗಳು ದೃಢಪಟ್ಟಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net