vlogger : ಅಮೆರಿಕದ ವ್ಲಾಗರ್ವೊಬ್ಬನನ್ನು ಭಾರತೀಯ ವ್ಯಕ್ತಿ ಊಟಕ್ಕೆ ಆಹ್ವಾನಿಸಿರುವ ಹೃದಯೀಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವ್ಲಾಗರ್ @jaystreazy ತನ್ನ Instagram ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಭಾರತೀಯ ಸ್ಥಳೀಯ ವ್ಯಕ್ತಿಯೊಂದಿಗೆ ಸಾಂದರ್ಭೀಕವಾಗಿ ಸಂವಹನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವ್ಯಕ್ತಿ ವ್ಲಾಗರ್ಗೆ ನನ್ನ ಮನೆಗೆ ಊಟ ಮಾಡಲು ಬರುತ್ತೀರಾ? ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಆತನ ಮನೆಗೆ ಹೋಗಲು ಒಪ್ಪುತ್ತಾರೆ.
ಮನೆಗೆ ಬಂದ ನಂತರ ವ್ಲಾಗರ್ ಆಶ್ಚರ್ಯ ವ್ಯಕ್ತಪಡಿಸಿದ್ದು, ನಿಮ್ಮ ಮನೆ ತುಂಬಾ ದೊಡ್ಡದಾಗಿದೆ ಎಂದು ತಿಳಿಸುತ್ತಾನೆ. ನಂತರ ಅವನ ತಾಯಿ ಅಡುಗೆ ಮನೆಯಲ್ಲಿರುವುದನ್ನು ಕಂಡು ನಿಮ್ಮ ತಾಯಿ ಅಡುಗೆ ಮಾಡುತ್ತಾರೆಯೇ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಹೌದು ಊಟ ಸಿದ್ಧವಾಗಿದೆ ಎಂದು ತಿಳಿಸುತ್ತಾನೆ.
ನಂತರ ಇಬ್ಬರು ಕೂತು ಊಟ ಮಾಡುವಾಗ ತಟ್ಟೆಯಲ್ಲಿ ಹಲವಾರು ರೀತಿಯ ಖಾದ್ಯಗಳನ್ನು ಇರುವುದನ್ನು ವ್ಲಾಗರ್ ತೋರಿಸುತ್ತಾನೆ. ಅದರಲ್ಲಿ ಅನ್ನ, ದಾಲ್ ಸೂಪ್, ಹಸಿರು ತರಕಾರಿ, ಚಪಾತಿ ಇರುವುದನ್ನು ನೋಡಿದ ವ್ಲಾಗರ್ ಸಂತೋಷದಿಂದ ಅವುಗಳನ್ನೆಲ್ಲವನ್ನೂ ಸೇವಿಸುತ್ತಾನೆ.
ಇನ್ನು ವ್ಲಾಗರ್ ಊಟ ಮಾಡುವಾಗ ಮನೆಯವರು ಚಮಚ ನೀಡಿದ್ದು, ಇಲ್ಲ ನಾನು ನಿಮ್ಮ ಮನೆಯಲ್ಲಿದ್ದೇನೆ ಕೈಯಲ್ಲಿ ತಿನ್ನುತ್ತೇನೆ. ಆಥಿತ್ಯ ತುಂಬಾ ಚೆನ್ನಾಗಿದೆ ಧನ್ಯವಾದಗಳು ಎಂದು ತಿಳಿಸುತ್ತಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತೀಯರು ವಿಶೇಷವಾಗಿದ್ದಾರೆ. ಅಪರಿಚಿತರನ್ನು ಕುಟುಂಬದಂತೆ ನೋಡಿಕೊಳ್ಳುತ್ತಾರೆ. ಭಾರತದಲ್ಲಿ ಮಾತ್ರ ಇಂತಹ ಮನೆಗಳನ್ನು ನೋಡಲು ಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ನೆಟ್ಟಿಗ ಅಮೆರಿಕನ್ ಪ್ರವಾಸಿ ಕೈಯಲ್ಲಿ ಊಟಮಾಡುವ ಮೂಲಕ ಸಂಸ್ಕೃತಿಯನ್ನು ಗೌರವಿಸುವುದು ತುಂಬಾ ಸುಂದರವಾಗಿದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್)