ನವದೆಹಲಿ: ಅಮಿತ್ ಷಾ ಹುಟ್ಟುಹಬ್ಬಕ್ಕೆ ಇಂದು (ಅ.22) ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ.
58ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಿಜೆಪಿಯ ಚಾಣಕ್ಯ ಅಮಿತ್ ಷಾ ಗೆ ಎಲ್ಲರು ಶುಭ ಹಾರೈಸುತ್ತಿದ್ದಾರೆ. ಪ್ರಧಾನಿ ಮೋದಿ, 'ಅಮಿತ್ ಷಾ ಕಾಪರೇಟಿವ್ ಕ್ಷೇತ್ರದಲ್ಲಿ ಪ್ರಶಂಸನೀಯ ಸಾಧನೆ ಮಾಡಿದ್ದಾರೆ. ಅವರು ನಮ್ಮ ದೇಶಕ್ಕಾಗಿ ದೀರ್ಘ ಆಯಸ್ಸು ಹಾಗೂ ಆರೋಗ್ಯವನ್ನು ಹೊಂದಲಿ' ಎಂದು ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಟ್ವಿಟ್ಟರ್ನಲ್ಲಿ ಮೋದಿ ಮತ್ತು ಷಾ ಅವರ ಹಳೆಯ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಅದೇ ಟ್ವೀಟ್ನಲ್ಲಿ 'ಭಾರತದ ಶಿಲ್ಪಿ ಪಕ್ಕದಲ್ಲಿ ಅನೇಕ ದಶಕಗಳಿಂದ ಧೃಢವಾಗಿ ನಿಂತಿರುವ ಅಮಿತ್ ಷಾ ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರನೀಯ ಅಮಿತ್ ಷಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು' ಎಂದು ಬರೆದಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಭೂಪೇಂದ್ರ ಯಾದವ್ ಸೇರಿ ಅನೇಕ ಬಿಜೆಪಿ ನಾಯಕರು ಶುಭ ಹಾರೈಸಿದ್ದಾರೆ.